ಪರಿಶಿಷ್ಟ ಪಂಗಡದ ಬೇಡಿಕೆಗೆ ಆಗ್ರಹ: ಡಿಸಿ ಮೂಲಕ ಗೃಹ ಸಚಿವ ಅಮಿತ್ ಷಾಗೆ ಮನವಿ – ಪಿ.ಬಿ.ಅಂಜುಕುಮಾರ್
ದಾವಣಗೆರೆ: ಪರಿಶಿಷ್ಟ ಪಂಗಡದ ದಶಕಗಳ ಬೇಡಿಕೆಯಾಗಿರುವ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಂವಿಧಾನ ಬದ್ಧವಾದ ೭.೫ ಮೀಸಲಾತಿ ನೀಡಲು ರಾಜ್ಯಸರ್ಕಾರಕ್ಕೆ ಸೂಚಿಸಬೇಕು ಎಂಬುದು ಸೇರಿದಂತೆ ನಾಲ್ಕು ಅಂಶಗಳ ಭಿನ್ನವೆತ್ತಳೆಯನ್ನು ಸಾಮಾಜಿಕ ಕಾರ್ಯಕರ್ತ ಪಿ.ಬಿ.ಅಂಜುಕುಮಾರ್ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವ ಅಮಿತ್ ಷಾ ಅವರಿಗೆ ಮನವಿ ಸಲ್ಲಿಸಿತು.
ಚುನಾವಣಾ ಪೂರ್ವದಲ್ಲಿ ರಾಜ್ಯ ಬಿಜೆಪಿ ಘೋಷಿಸಿದಂತೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಚಿತ್ರದುರ್ಗದಲ್ಲಿ ಅಮಿತ್‌ಷಾ ಅವರು ಈ ಹಿಂದೆ ಚುನಾವಣಾ ವೇಳೆಯಲ್ಲಿ ಘೋಷಿಸಿದಂತೆ ಮದಕರಿ ನಾಯಕರ ೧೦೦ ಕೋಟಿ ವೆಚ್ಚದ ಥೀಮ್ ಪಾರ್ಕ್ ನಿರ್ಮಿಸಬೇಕು,,ಹಾಗೂ ರಾಜ್ಯ ಸಚಿವ ಸಂಪುಟದಲ್ಲಿ ಸಮಾಜಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಲಾಗಿದ್ದು, ಜನಸಂಖ್ಯೆಯ ಆಧಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ, ಕರ್ನಾಟಕ ಏಕತಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎನ್.ಹೆಚ್.ಹಾಲೇಶ್, ಮಾನವಹಕ್ಕುಗಳ ರಕ್ಷಣೆ ಕಾರ್ಯದರ್ಶಿ ಪ್ರಕಾಶ ಆವರಗೆರೆ, ಟಿ.ಎಸ್.ಕರಿಯಪ್ಪ, ಬಿ.ಮಲ್ಲಿಕಾರ್ಜುನ, ಸುರೇಶ್ ಗೋಶಾಲೆ, ನಿಟ್ಟೂರು ಅಜೇಯ್, ಹದಡಿ ಪಾಲಾಕ್ಷ, ತಿಮ್ಮೇಶ್ ಇನ್ನಿತರರು ಹಾಜರಿದ್ದರು.