Parliament : ಸಂಸತ್ ಭದ್ರತಾ ಉಲ್ಲಂಘನೆ; ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ ಬಂಧನ

parliament

ನವದೆಹಲಿ:Parliament : ದೇಶದ ಅತೀ ಭದ್ರತಾ ಪ್ರದೇಶವೆಂದು ಪರಿಗಣಿಸಲ್ಪಡುವ ಸಂಸತ್ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ ದೊಡ್ಡ ಭದ್ರತಾ ಉಲ್ಲಂಘನೆ ನಡೆದಿದೆ. ರೈಲ್‌ಭವನ ಕಡೆಯಿಂದ ಮರ ಹತ್ತಿ ಗೋಡೆ ದಾಟಿದ ವ್ಯಕ್ತಿಯೊಬ್ಬರು ಹೊಸ ಸಂಸತ್ ಕಟ್ಟಡದ ಗರುಡ ಗೇಟ್‌ವರೆಗೆ ತಲುಪಿದ್ದಾರೆ. ಬೆಳಿಗ್ಗೆ 6.30ರ ಸುಮಾರಿಗೆ ನಡೆದ ಈ ಘಟನೆ ಬಳಿಕ ಭದ್ರತಾ ಸಿಬ್ಬಂದಿ ಆತನನ್ನು ತಕ್ಷಣವೇ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನ ಗುರುತು, ಉದ್ದೇಶ ಹಾಗೂ ಬಹುಹಂತದ ಭದ್ರತೆಯನ್ನು ಹೇಗೆ ದಾಟಿದರು ಎಂಬುದರ ಕುರಿತು ವಿಚಾರಣೆ ಮುಂದುವರಿದಿದೆ. ಘಟನೆಯ ಸಂಪೂರ್ಣ ಅನುಕ್ರಮವನ್ನು ತಿಳಿದುಕೊಳ್ಳಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಸಂಸತ್ತಿನ ಮಳೆಗಾಲದ ಅಧಿವೇಶನ ಮುಗಿದ ಕೇವಲ ಒಂದು ದಿನದ ನಂತರ ನಡೆದಿದೆ. ಜುಲೈ 21ರಂದು ಪ್ರಾರಂಭವಾದ ಅಧಿವೇಶನ 21 ಕಾರ್ಯದಿನಗಳ ಬಳಿಕ ಗುರುವಾರ ಅಂತ್ಯಗೊಂಡಿತ್ತು.

ಹಿಂದೆ ಇಂತಹ ಘಟನೆಗಳು ನಡೆದ ಉದಾಹರಣೆಗಳೂ ಇವೆ. ಕಳೆದ ವರ್ಷ, ಒಬ್ಬ ವ್ಯಕ್ತಿ ಸಂಸತ್ ಗೋಡೆ ಹಾರಿ ಅನೆಕ್ಸ್ ಕಟ್ಟಡದೊಳಗೆ ನುಗ್ಗಿದ್ದು, ಸಿಐಎಸ್ಎಫ್ ಸಿಬ್ಬಂದಿ ಅವನನ್ನು ಹಿಡಿದಿದ್ದರು. 2023ರಲ್ಲಿ, ಡಿಸೆಂಬರ್ 13ರಂದು ಸಂಸತ್ತಿನ ಮೇಲಿನ ದಾಳಿಯ 22ನೇ ವಾರ್ಷಿಕೋತ್ಸವದಂದು, ಲೋಕಸಭಾ ಸಭಾಂಗಣದಲ್ಲಿ ಹಳದಿ ಹೊಗೆಯನ್ನು ಹೊರಸೂಸುವ ಡಬ್ಬಿಗಳನ್ನು ಬಳಸಿ ವ್ಯಕ್ತಿಗಳು ಗೊಂದಲ ಸೃಷ್ಟಿಸಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!