Parvo Virus: ಶ್ವಾನ ಪ್ರಿಯರೇ ಎಚ್ಚರ.! ನಗರದಲ್ಲಿ ನಾಯಿಗಳಿಗೆ ವಕ್ಕರಿಸಿದೆ ‘ಪಾರ್ವೋ ಸೋಂಕು’

ದಾವಣಗೆರೆ: ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಶ್ವಾನಗಳಿಗೆ ಪಾರ್ವೋ Parvo Disease (ಮೆದುಳು ಜ್ವರ) ಸೋಂಕು ವಕ್ಕರಿಸಿದ್ದು, ಸಾಕುಪ್ರಾಣಿ Pet Dog Lovers ಮಾಲೀಕರು ತಮ್ಮ ನಾಯಿಮರಿಗಳನ್ನು ಮನೆಯಿಂದ ಹೊರಗಡೆ ಕರೆದೊಯ್ಯದಂತೆ ಪಶು ಸಂಗೋಪಾನೆ ಇಲಾಖೆಯು ತಿಳಿಸಿದೆ.
ಪಾರ್ವೋ ವೈರಸ್ ಕೊರೋನಾ ವೈರಸ್ನಂತೆಯೇ ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ರೋಗ ಪಸರಿಸುವಂತೆಯೇ ಒಂದು ನಾಯಿಯಿಂದ ಇನ್ನೊಂದು ನಾಯಿಗೆ ವೈರಸ್ ಹರಡುತ್ತದೆ. ಆದ್ದರಿಂದ ನಾಯಿ ಪ್ರಿಯರು ತಮ್ಮ ನಾಯಿಗಳನ್ನು ಮನೆಯಿಂದ ಆಚೆಗೆ ಕರೆದೊಯ್ಯದೇ ಆದಷ್ಟು ತಮ್ಮ ಮನೆಗಳಲ್ಲಿಯೇ ಚೆನ್ನಾಗಿ ನೋಡಿಕೊಳ್ಳಿ ಎಂದು ಪಶು ಸಂಗೋಪಾನೆ ಇಲಾಖೆಯವರು Animal Husbandary ತಿಳಿಸುತ್ತಿದ್ದಾರೆ.
ಪಾರ್ವೋ ವೈರಸ್ ರೋಗದ ಲಕ್ಷಣಗಳು:
Parvo Virus Disease Identification:
ಸಾಮಾನ್ಯವಾಗಿ ಈ ವೈರಸ್ನ್ನು ಕೆಲವು ಲಕ್ಷಣದಿಂದ ಗುರುತಿಸಬಹುದು. ಈ ಕೆಳಗಿನ ಲಕ್ಷಣಗಳು ತಮ್ಮ ನಾಯಿಗಳಲ್ಲಿ ಕಂಡುಬAದಲ್ಲಿ ತಡಮಾಡದೇ ತಕ್ಷಣವೇ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸಿ.
1) ರೋಗ ಪೀಡಿತ ನಾಯಿ ವಿಪರೀತ ಜ್ವರದ ಪರಿಣಾಮ ತಲೆ ಎತ್ತುವುದಿಲ್ಲ.
2) ಕವುಚಿ ಮಲಗಿ ತನ್ನ ಮುಂಗಾಲುಗಳ ಮಧ್ಯದಲ್ಲಿ ತಲೆಯನ್ನಿಟ್ಟು ನರಳಾಡುತ್ತಾ ಮಲಗುತ್ತವೆ.
3) ಆಹಾರ ಸೇವನೆಯನ್ನು ತ್ಯಜಿಸಿ ಕ್ಷೀಣವಾಗುತ್ತದೆ. ನಂತರ ಕೇವಲ ನೀರನ್ನು ಮಾತ್ರ ಸೇವಿಸುತ್ತದೆ.
4) ಕೆಲವು ನಾಯಿಮರಿಗಳಲ್ಲಿ ನರ ದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆ ಕಾಡುತ್ತವೆ.
5) ಕೆಲವು ನಾಯಿಗಳು ಪದೇ ಪದೇ ವಾಂತಿ ಮಾಡುತ್ತಿರುತ್ತವೆ.
6) ಎದ್ದು ಓಡಾಡಲು ಸಾಧ್ಯವಾಗದೇ ತುಂಬಾ ಸುಸ್ತಾಗಿರುತ್ತವೆ.
7) ವೈರಸ್ ಗೆ ತುತ್ತಾದ ನಾಯಿಗಳು ರೇಬಿಸ್ ರೋಗ ಪೀಡಿತ ನಾಯಿಯಂತೆ ವರ್ತಿಸುತ್ತವೆ.
9) ಮೂಗು ಹಾಗೂ ಬಾಯಿಯಿಂದ ಕೀವು ಬರಲು ಆರಂಭವಾಗುತ್ತವೆ.
ಮೂರು ತಿಂಗಳ ಮೊದಲೇ ನಾಯಿಗಳಿಗೆ ರೋಗದ ಸೋಂಕು ತಗುಲಿದರೂ ಆರಂಭದಲ್ಲಿ ಯಾವುದೇ ಲಕ್ಷಣ ಕಾಣುವುದಿಲ್ಲ. ಕೊನೆಯ ಹತ್ತರಿಂದ ಹದಿನೈದು ದಿನಗಳಲ್ಲಿ ಈ ರೋಗ ಉಲ್ಭಣಿಸಿ ನಾಯಿಗಳು ಸಾವನ್ನಪ್ಪುತ್ತವೆ. ವೈರಸ್ಗೆ ತುತ್ತಾದ ನಾಯಿಗಳ ಮೂಗು ಮತ್ತು ಬಾಯಿಯಿಂದಲೂ ಕೀವು ಮಿಶ್ರಿತ ನೀರು ಬರುವುದರಿಂದ ಅವುಗಳು ಸಂಚರಿಸಿದ ಉದ್ದಕ್ಕೂ ಬೀಳುತ್ತವೆ. ಇದರ ಪರಿಣಾಮದಿಂದ ಒಂದು ನಾಯಿಯಿಂದ ಮತ್ತೊಂದು ನಾಯಿಗೆ ಸುಲಭವಾಗಿ ಈ ವೈರಸ್ ಹರಡುತ್ತದೆ.
ಹಾಗಾದರೆ ಪಾರ್ವೋ ವೈರಸ್ ಯಿಂದ ರಕ್ಷಣೆ ಹೇಗೆ:
Parvo Virus Treatment And Protection:
ಪಾರ್ವೋ ವೈರಸ್ನ್ನು ಆಚಿಟಿ ಬಯೋಟಿಕ್ Achity Biotech Treatment ಚಿಕಿತ್ಸೆಯ ಮೂಲಕ ತಡೆಗಟ್ಟಬಹುದು. ಇದಕ್ಕಾಗಿ ನಾಯಿ ಪ್ರಿಯರು ತಮ್ಮ 60 ದಿನದ ನಾಯಿಮರಿಗಳಿಗೆ ಡಿಸ್ಟೆಂಪರ್ ವ್ಯಾಕ್ಸಿನ್ ನೀಡಬೇಕಾಗುತ್ತದೆ. ಬಳಿಕ 90 ದಿನಗಳ ಬಳಿಕ ಚುಚ್ಚು ಮದ್ದು ನೀಡಬೇಕು. ಅಲ್ಲದೇ ಪ್ರತಿ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರಿಂದ ಈ ವೈರಸ್ನಿಂದ ನಾಯಿಗಳನ್ನು ರಕ್ಷಿಸಬಹುದು.