ವಾನರಸೇನೆ ವತಿಯಿಂದ ರಾಮನವಮಿ ಸಂಭ್ರಮದ ಪಥ ಸಂಚಲನಾ ಜಾಥಾ: ಪವನ್ ರೇವಣಕರ್

ವಾನರಸೇನೆ ವತಿಯಿಂದ ರಾಮನವಮಿ ಸಂಭ್ರಮದ ಪಥ ಸಂಚಲನಾ ಜಾಥಾ: ಪವನ್ ರೇವಣಕರ್

ದಾವಣಗೆರೆ :ಈ‌ ಕುರಿತು ಪ್ರತಿಕ್ರೀಯೇ ನೀಡಿದ, ಸಂಚಾಲಕರಾದ ಪವನ್, ಇದೇ ಗುರುವಾರ ದಿನಾಂಕ: 30-03-2023 ರಂದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ನವಮಿ ಪ್ರಯುಕ್ತ, ರಾಮ ರಾಜ್ಯ ಸಂಕಲ್ಪ ಪಥ ಸಂಚಲನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ‌ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ವಾನರ ಸೇನೆ, ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ಪ್ರತಿಷ್ಠಾನ ಹಾಗೂ ಇಸ್ಕಾನ್ ಸಂಸ್ಥೆ ದಾವಣಗೆರೆ ವತಿಯಿಂದ‌ ಆಚರಿಸಲಾಗುತ್ತಿದ್ದು.

ಪಥ ಸಂಚಲನದ ಮಾರ್ಗವು ಎಂ.ಸಿ.ಸಿ ಎ ಬ್ಲಾಕ್ ಇಸ್ಕಾನ್ ಮಂದಿರ (ರೆಡ್ಡಿ ಬಿಳ್ಡಿಂಗ್) ದಿಂದ ಪ್ರಾರಂಭವಾಗಿ, ಶ್ರೀ ರಾಮ ಮಂದಿರ, ಪಿ.ಜೆ ಬಡಾವಣೆ ವರೆಗೆ ಸಂಚರಿಸಲಿದೆ.

ದಿನಾಂಕ: 30-03-2023, ಗುರುವಾರ, ಸಂಜೆ : 4.30 ಕ್ಕೆ ಎಲ್ಲರೂ ಬರಬೇಕು ಎಂದು ಸಮಸ್ತ ಹಿಂದೂ ಬಾಂಧವರಿಗೆ ಸ್ವಾಗತಿಸುತ್ತಿದ್ದೇವೆ.

ಕಾರ್ಯಕ್ರಮದ ಪ್ರಬಂಧಕರ ಸಮಿತಿಯಲ್ಲಿ ಕಿರಣ್ ಟಿ.ಎಂ, ವೆಂಕಟೇಶ್ ಹರ್ಡೇಕರ್, ನಾಗರಾಜ್ ಸೂರ್ವೆ, ವಿಕಾಸ್, ರಾಮ ಕೃಷ್ಣ ರೆಡ್ಡಿ, ಪ್ರಭು, ಪ್ರಸನ್ನ, ಗಿರೀಶ್, ಅಭಿಷೇಕ್, ಕಿಶೋರ್ ಕುಮಾರ್, ಸಚಿನ್ ವರ್ಣೇಕರ್, ಲಿಂಗರಾಜ್ ಯಾದವ್, ವಿವೇಕ್ ಪವಾರ್, ಅನಿಲ್ ಜೈರಾಮ್, ಕಾರ್ತಿಕ್ ರಾವ್, ಗಣೇಶ್, ಯೋಗೇಂದ್ರ, ರಘು ತೋಗಾಟ್‍ ಜವಾಬ್ದಾರಿ ಹೊಂದಿರುತ್ತಾರೆ.

ಸಾರ್ವಜನಿಕರಿಗೆ ವಿಷೇಶ ಸೂಚನೆ: ಭಾಗವಹಿಸುವ ಪುರುಷರು ಬಿಳಿ ಶರ್ಟ್ ಹಾಗೂ ಬಿಳಿ ಪಂಚೆ, ಕೇಸರಿ ಶಾಲ್ ಕಡ್ಡಾಯವಾಗಿ ಧರಿಸಬೇಕು‌ ಹಾಗೂ ಮಹಿಳೆಯರು ಶ್ವೇತ ವರ್ಣದ ಅಲಂಕಾರಿಕ ಸೀರೆಯನ್ನು ಕಡ್ಡಾಯ‌ ಧರಿಸಬೇಕು.

ಹೆಚ್ಚಿನ ಮಾಹಿತಿಗಾಗಿ
ಪವನ್ ರೇವಣಕರ್ 9731102542.
ವಿವೇಕ್ ಪವಾರ್ 9743814299.
ಯೋಗೇಂದ್ರ 86604 62917 ಸಂಪರ್ಕಿಸಿ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!