ಪತ್ನಿಯ ಬುದ್ದಿಮಾತಿಗೆ ಪತಿ ಕೊಲೆ ಮಾಡೊದಾ.? ಮುಂದೆನಾಯ್ತು.!
ದಾವಣಗೆರೆ: ಕುಡಿತ ನಿಲ್ಲಿಸುವಂತೆ ಬುದ್ದಿ ಹೇಳಿದ ಪತ್ನಿಯನ್ನೇ ಕೊಲೆಗೈದಿದ್ದ ಪಾಪಿ ಪತಿರಾಯನನ್ನ ಹೊನ್ನಾಳಿ ಪೊಲೀಸರು ಘಟನೆ ನಡೆದು 8 ತಾಸಿನೊಳಗಾಗಿ ಬಂಧಿಸಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದ ಗಿರೀಶ ಬಂಧಿತ ಆರೋಪಿ. ಇವನು ಹೋಂಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ 10 ವರ್ಷಗಳ ಹಿಂದೆ ತನ್ನ ಅತ್ತೆ ಮಗಳು ಶಿಲ್ಪಾ ಎಂಬುವಳನ್ನು ಮದುವೆ ಮಾಡಿಕೊಂಡಿದ್ದ.ಆದರೆ, ಈ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಈಗ್ಗೆ 02 ವರ್ಷಗಳಿಂದ ಗಂಡ – ಹೆಂಡತಿ ಇಬ್ಬರೂ ಗುಡ್ಡೆಹಳ್ಳಿ ಗ್ರಾಮವನ್ನು ಬಿಟ್ಟು ಸೊರಟೂರು ಗ್ರಾಮಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.
ಆರೋಪಿ ಗಿರೀಶ ತಾನು ದುಡಿದ ಹಣವನ್ನಷ್ಟೇ ಅಲ್ಲದೇ ತನ್ನ ಪತ್ನಿ ಶಿಲ್ಪಾ ಕೂಲಿ ಮಾಡಿ ಬಂದ ಹಣವನ್ನು ಮದ್ಯಪಾನ ಮಾಡಿ ಹಾಳು ಮಾಡುತ್ತಿದ್ದ. ಅಲ್ಲದೇ ಶಿಲ್ಪಾಳ ಬಂಗಾರದ ಆಭರಣಗಳನ್ನು ಸಹ ಬ್ಯಾಂಕುಗಳಲ್ಲಿ ಅಡ ಇಟ್ಟು ಸಾಲ ಪಡೆದು ಕುಡಿಯುತ್ತಿದ್ದ. ಇದರಿಂದ ಬೇಸತ್ತಿದ್ದ ಶಿಲ್ಪ ದಿನನಿತ್ಯ ಕುಡಿತ ಬಿಡುವಂತೆ ಆತನೊಂದಿಗೆ ಜಗಳವಾಡುತ್ತಿದ್ದಳು.
ಮೊನ್ನೆ ಶನಿವಾರ ಮಧ್ಯಾಹ್ನದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ಗಿರೀಶ, ಶಿಲ್ಪಾಳಿಗೆ ಮದ್ಯಪಾನ ಮಾಡಲು ಹಣ ಕೇಳಿ ಅವಳೊಂದಿಗೆ ಜಗಳ ಮಾಡಿದ್ದಾನೆ. ಶಿಲ್ಪ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತೀಯಾ ಅಂತಾ ಬುದ್ದಿವಾದ ಹೇಳಿದ್ದಾಳೆ. ಆದರೆ, ಇದನ್ನು ತಿಳಿಯದ ಪತಿರಾಯ ಅವಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಆಕೆಯನ್ನು ಕೊಲೆ ಮಾಡಿದ್ದ.
ಆರೋಪಿತರ ಪತ್ತೆಗೆ ಜಾಲ ಬೀಸಿದ್ದ ಪೊಲೀಸ್ ತಂಡವು ಹೊನ್ನಾಳಿ ಸಿಪಿಐ ದೇವರಾಜ.ಟಿ.ವಿ ಇವರ ನೇತೃತ್ವದಲ್ಲಿ ಪಿಎಸ್ಐ ಬಸವರಾಜ ಬಿರಾದಾರ, ಪಿಎಸ್‌ಐ ಮತ್ತು ಸಿಬ್ಬಂದಿಯವರ ತಂಡವನ್ನು ರಚಿಸಿ ಪ್ರಕರಣದ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.