ಜನರು ವಾಸಿಸುವ ಸ್ಥಳದಲ್ಲಿಯೇ ಪಡಿತರ ವಿತರಸಿ: ಕಾಂಗ್ರೇಸ್ ಜಾಲತಾಣದ ಅದ್ಯಕ್ಷ ಗೋವಿಂದ ಹಾಲೆಕಲ್ ಒತ್ತಾಯ
ದಾವಣಗೆರೆ: ದಿನದಿಂದ ದಿನಕ್ಕೆ ಈ ಮಹಾಮಾರಿ ಕರೋನ ವ್ಯಾಪಕವಾಗಿ ಹರಡುತ್ತಿದ್ದು ಗ್ರಾಮಾಂತರ ಪ್ರದೇಶದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದಾವೆ ಹಾಗಾಗಿ ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಸಹ ಒಂದೂರಿಂದ ಹೋಗಿ ಇನ್ನೊಂದೂರಲ್ಲಿ ಪಡಿತರ ಆಹಾರ ಪದಾರ್ಥಗಳನ್ನು ತರುವಂತಹ ವ್ಯವಸ್ಥೆ ಜಾರಿಯಲ್ಲಿದೆ ಇಂತಹ ಸಮಯದಲ್ಲಾದರು ಜಿಲ್ಲಾಡಳಿತ ಮತ್ತು ಸಂಭಂದಿಸಿದ ಆಹಾರ ಇಲಾಖೆಯ ಅಧಿಕಾರಿಗಳು ಈ ವಿಷಯವಾಗಿ ಗಮನ ಹರಿಸಬೇಕೆಂದು ಅವರಲ್ಲಿ ಮನವಿ ಮಾಡಿಕೊಳ್ಳುತ್ತೆನೆ.
ದಾವಣಗೆರೆ ತಾಲ್ಲೂಕು ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ಸರಿ ಸುಮಾರು 300 ಕ್ಕೂ ಹೆಚ್ಚು B.P.L. ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕ ಕುಟುಂಬಗಳಿದ್ದು ಪ್ರತಿ ತಿಂಗಳು ಪಡಿತರ ಆಹಾರ ಪದಾರ್ಥಗಳನ್ನು ಪಡೆಯಲು 2 ಕಿಲೋಮೀಟರ್ ದೂರದ ನಾಗನೂರು ಗ್ರಾಮಕ್ಕೆ ಹೋಗಬೇಕಿದೆ.
ಈ ಹಿಂದೆ ನಾಗನೂರು ಗ್ರಾಮದಲ್ಲಿ ನಡೆದ ಆಹಾರ ಆದಾಲತ್ ಕಾರ್ಯಕ್ರಮದಲ್ಲಿ ಆಹಾರ ನಿರೀಕ್ಷಕರ ಮುಖಾಂತರ ಊರಿನ ಪರವಾಗಿ ತಹಶೀಲ್ದಾರ್ ಅವರಿಗೆ ಅರ್ಜಿಯನ್ನು ನೀಡಿದರು ಸಹ ಇದುವರೆಗೂ ಯಾವುದೇ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಮಾಡಿರುವುದಿಲ್ಲ ಹಾಗಾಗಿ ಇಂತಹ ಕೋವಿಡ್ ಸಂದರ್ಭದಲ್ಲಾದ್ದರು ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿಯೇ ಪಡಿತರ ಆಹಾರ ವಿತರಣೆ ವ್ಯವಸ್ಥೆ ಮಾಡಬೇಕೆಂದು ಸಮಸ್ತ ಗ್ರಾಮಸ್ಥರ ಪರವಾಗಿ ಅಸಿಸ್ಟೆಂಟ್ ಕಮಿಷನರ್ ಹಾಗೂ ತಹಶಿಲ್ದಾರರಲ್ಲಿ ಪತ್ರಿಕೆ ಹೇಳಿಕೆ ಮುಖಾಂತರ ಮನವಿ ಕೊಳ್ಳುತ್ತೆನೆ.
ಗೋವಿಂದ ಹಾಲೇಕಲ್ಲ್
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರು