Petrol Price: ಪೆಟ್ರೊಲ್ ಬೆಲೆ ಜಾಸ್ತಿಯಾದ್ರೆ ಸೈಕಲ್ ನಲ್ಲಿ ಓಡಾಡಬೇಕಾ.? ಸಂಸದ ಜಿಎಂ ಸಿದ್ದೇಶ್ವರ ಹೇಳಿದ್ದಾದ್ರೂ ಏನು..? ಎಂ ಪಿ ವಿಡಿಯೋ ನೋಡಿ, ಶೇರ್ ಮಾಡಿ

GM SIDDESHWAR WITH PM MODI PETROL PRICE

ದಾವಣಗೆರೆ: ಬ್ಯಾರಲ್ ರೇಟ್ ಜಾಸ್ತಿ ಇದೆ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಎಂದು ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ತಿಳಿಸಿದ್ದಾರೆ. ಇಂದು ಮಾಧ್ಯಮದವರು ಸಂಸದರಿಗೆ ಜನರು ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ ನಾವೆಲ್ಲಾ ಸೈಕಲ್ ನಲ್ಲಿ ಓಡಾಡಬೇಕಾ ಎಂದು ಕೇಳ್ತಾ ಇದ್ದಾರೆ ಎಂದು ಪ್ರಶ್ನೆ ಮಾಡಲಾಯಿತು, ಇದಕ್ಕೆ ಉತ್ತರಿಸಿದ ಸಂಸದರು, ಜನ ಸೈಕಲ್ ನಲ್ಲಿ ಓಡಾಡಿದ್ರೆ ಏನ್ ಆಗುತ್ತೆ.‌ ಒಳ್ಳೆಯ ವ್ಯಾಯಾಮ ಆಗುತ್ತೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿಕೆ ನೀಡಿದರು. ನೀವು ಪ್ರಶ್ನೆ ಕೇಳಿದ್ರಿ ನಾನು ಅದಕ್ಕೆ ಉತ್ತರ ಕೊಟ್ಟಿದ್ದಿನಿ.

ಸೈಕಲ್ ನಲ್ಲಿ ಓಡಾಡಿದ್ರೆ ವ್ಯಾಯಮ ಆಗಿತ್ತೆ ಬಿಡಿ. ಪೆಟ್ರೋಲ್ ರೇಟ್ ಜಾಸ್ತಿ ಆದ್ರೆ ಏನ್ ಮಾಡೋಕೆ ಆಗುತ್ತೆ ಅದನ್ನೆಲ್ಲ ಮೋದಿ ನೋಡಿಕೊಳ್ಳುತ್ತಾರೆ. ಕೋವಿಡ್ ಹೋದ ಮೇಲೆ ಪೆಟ್ರೋಲ್ ದರ ಇಳಿಸುತ್ತಾರೆ ಎಂದು ಹೇಳಿದರು. ಇದೇ ವೇಳೆ ಜಿ ಎಸ್ ಟಿ ಪಾಲು ರಾಜ್ಯಕ್ಕೆ ಸಿಗ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನಲೆ ಹಣಕಾಸು ಸಚಿವರನ್ನ ಕೇಳಿ ಎಂದು ಮತ್ತೆ ಹೇಳಿಕೆ ನೀಡಿದರು. ಜಿಎಸ್ ಟಿ ಪಾಲಿನ ಬಗ್ಗೆ ನಮಗೇನೂ ಗೊತ್ತಿಲ್ಲ. ಈ ಬಗ್ಗೆ ಹಣಕಾಸು ಸಚಿವರನ್ನೆ ಕೇಳಿ. ಕರ್ನಾಟಕದಲ್ಲಿ ನಾಲ್ಕು ಜನ ಸಚಿವರು ಇದ್ದಾರೆ ಅವರು ಕೇಳ್ತಾರೆ ಎಂದರು.

ಸಂಸದರು ಪೆಟ್ರೋಲ್ ದರ ಏರಿಕೆ ಬಗ್ಗೆ ಹೇಳಿರುವ ವಿಡಿಯೋ ನೋಡಿ…

Leave a Reply

Your email address will not be published. Required fields are marked *

error: Content is protected !!