ppe kit & tea stall: ಗೃಹವೈದ್ಯರ ಮುಷ್ಕರ ನಾಲ್ಕನೆ ದಿನಕ್ಕೆ: ಟೀ ಸ್ಟಾಲ್, ಪಿಪಿಇ ಕಿಟ್ ಧರಿಸಿ ಆರ್ಥಿಕ ಸ್ಥಿತಿ ಬಗ್ಗೆ ಅಣಕು ಪ್ರದರ್ಶನ ತೋರಿದ ವೈಧ್ಯರು

ದಾವಣಗೆರೆ: ಬಾಕಿ ಶಿಷ್ಯವೇತನಕ್ಕೆ ಆಗ್ರಹಿಸಿ ಗೃಹವೈದ್ಯರು ನಡೆಸುತ್ತಿರುವ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು, ಇಂದು ಗೃಹವೈದ್ಯರು ಟೀ ಸ್ಟಾಲ್ ಅಣಕು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು.
ನಿನ್ನೆ ಬೀದಿ ನಾಟಕ ಮಾಡಿ, ತಟ್ಟೆ ಬಾರಿಸಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಭಟನಾಕಾರರು ಇಂದು ಟೀ ಸ್ಟಾಲ್ ಮಾಡಿ, ಪಿಪಿಇ ಕಿಟ್ ಧರಿಸಿ ತಮ್ಮ ಆರ್ಥಿಕ ಸ್ಥಿತಿ ಬಗ್ಗೆ ಅಣಕು ಪ್ರದರ್ಶನ ಮಾಡಿದರು.

ಗೃಹವೈದ್ಯರುಗಳ ಮುಷ್ಕರ ದಿನ ದಿನಕ್ಕೂ ಕಾವು ಪಡೆಯುತ್ತಿದ್ದು, ಇದು ಹೀಗೆ ಮುಂದುವರಿದರೆ ಸೇವೆಯಿಂದ ಹೊರ ಉಳಿದು ಪ್ರತಿಭಟಿಸುವುದಾಗಿ ಈಗಾಗಲೇ ಎಚ್ಚರಿಸಿರುವ ಗೃಹವೈದ್ಯರು ಅದನ್ನು ಅನುಷ್ಟಾನಕ್ಕೆ ತರುತ್ತಾರೆಂಬುದರ ಬಗ್ಗೆ ಸಂದೇಹವೇ ಇಲ್ಲ.
