PG Doctors Stipend: ಶಿಷ್ಯವೇತನಕ್ಕೆ ವೈದ್ಯ ವಿದ್ಯಾರ್ಥಿಗಳಿಂದ ಮತ್ತೊಂದು ಹೋರಾಟ | ಕೊವಿಡ್ ವಾರಿಯರ್ಸ್ ಹೆಸರಿಗೆ ಮಾತ್ರ ಸೀಮಿತನಾ..?

IMG-20211001-WA0049

ದಾವಣಗೆರೆ: ಐದು ತಿಂಗಳಿನಿಂದ ಶಿಷ್ಯವೇತನ ನೀಡದ ಹಿನ್ನೆಲೆಯಲ್ಲಿ ಜೆಜೆಎಂ ಕಾಲೇಜು ವೈದ್ಯ ವಿದ್ಯಾರ್ಥಿಗಳು ಇಂದಿನಿಂದ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ.

ಇಲ್ಲಿನ ಜಯದೇವ ವೃತ್ತದಲ್ಲಿ ನೂರಾರು ಹೌಸ್ ಸರ್ಜನ್‌ಗಳು ಧರಣಿ ನಡೆಸುತ್ತಿದ್ದು, ಶಿಷ್ಯ ವೇತನ ನೀಡುವವರೆಗೂ ತಾವು ಮುಷ್ಕರ ಹಿಂಪಡೆಯುವುದಿಲ್ಲ ಸರ್ಕಾರ ಮತ್ತು ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಐದಾರು ತಿಂಗಳಿನಿಂದ ಕೋವಿಡ್ ಡ್ಯೂಟಿ ಸೇರಿದಂತೆ ಎಲ್ಲಾ ವಿಭಾಗದ ರೋಗಿಗಳಿಗೂ ಚಿಕಿತ್ಸೆ ನೀಡಿ ಸಏವೆ ಸಲ್ಲಿಸುತ್ತಿರುವ ತಮಗೆ ಸರ್ಕಾರ ಮತ್ತು ಕಾಲೇಜಿನ ಆಡಳಿತ ಮಂಡಳಿ ಶಿಷ್ಯವೇತನ ನೀಡದೆ ನಿರ್ಲಕ್ಷಿಸುತ್ತಿದ್ದು ಇದರಿಂದ ತಮಗೆ ಅನ್ಯಾಯವಾಗಿದೆ. ಆದ್ದರಿಂದ, ಕೂಡಲೇ ತಮಗೆಲ್ಲಾ ಮಂಜೂರು ಮಾಡಬೇಕು ಎಂದು ಮುಷ್ಕರ ನಿರತರು ಒತ್ತಾಯಿಸಿದರು.

Covid Warriors protest: ಮತ್ತೆ ಮುನ್ನೆಲೆಗೆ ಬಂದ ದಾವಣಗೆರೆಯ ವೈದ್ಯಕೀಯ ವಿದ್ಯಾರ್ಥಿಗಳ ಮುಷ್ಕರ.. ಹೆಸರಿಗೆ ಮಾತ್ರ ಕೋವಿಡ್ ವಾರಿಯರ್ಸ..? ಶಿಷ್ಯವೇತನಕ್ಕೆ ಹೀಗೆ ಮಾಡಿದ್ರೆ ಹೇಗೆ…?

ಎರಡನೇ ಅಲೆ ಕೋವಿಡ್-೧೯ ನಲ್ಲಿ ದಿನಂಪ್ರತಿ ನೂರಾರು ಜನರಿಗೆ ಚಿಕಿತ್ಸೆ ನೀಡಿ ಸೇವೆ ಸಲ್ಲಿಸಿದ ತಮಗೆ ಕೋವಿಡ್ ರಿಸ್ಕ್ ಡ್ಯೂಟಿಗೆ ನೀಡುವ ೧೦ ಸಾವಿರ ಹಣವೂ ಸೇರಿದಂತೆ ಒಟ್ಟಾರೆ ತಿಂಗಳಿಗೆ ೪೦ ಸಾವಿರ ಹಣವನ್ನು ಪಾವತಿಸಬೇಕು. ಆದರೆ, ಈ ವೇತನ ನೀಡದ ಹಿನ್ನೆಲೆಯಲ್ಲಿ ನಾವು ವೈದ್ಯಕೀಯ ಓದಿದರೂ ಸಹ ಹಣಕ್ಕಾಗಿ ಪಾಲಕರ ಮುಂದೆ ಕೈಚಾಚುಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಜಿಲ್ಲಾಧಿಕಾರಿ, ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರು ಸಏರಿದಂತೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಅವರು ಕಾಲೇಜಿನ ಆಡಳಿತ ಮಂಡಳಿಗೆ ಶಿಷ್ಯವೇತನ ಕೇಳಿ ಎನ್ನುತ್ತಾರೆ. ಆದರೆ, ಆಡಳಿತ ಮಂಡಳಿ ಸರ್ಕಾರಕ್ಕೆ ಕೇಳಿ ಎನ್ನುತ್ತದೆ. ಇದರಿಂದ ನ್ಯಾಯ ಸಿಗದೆ ನಾವೆಲ್ಲರೂ ಕಂಗಾಲಾಗಿದ್ದೇವೆ. ಆದ್ದರಿಂದ ಇಂದಿನಿಂದ ಸೇವೆಯೊಂದಿಗೆ ಮುಷ್ಕರ ಕೈಗೊಂಡಿದ್ದು, ಶಿಷ್ಯವೇತನ ನೀಡುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!