ಜಿಎಂ ಫಾರ್ಮಸಿ ಕಾಲೇಜಿನ ‘’ಕ್ಯಾನ್ಸರ್ ಜನ ಜಾಗೃತಿ ಜಾಥಾ”

ಕ್ಯಾನ್ಸರ್

ದಾವಣಗೆರೆ ಜಿಲ್ಲೆ 04/02/2024 – ಅರಿವು ಮೂಡಿಸುವ ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಬೆಂಬಲಿಸುವ ಪ್ರಯತ್ನದಲ್ಲಿ, ಜಿಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಅಂಡ್ ರಿಸರ್ಚ್ ಕಾಲೇಜು ಮತ್ತು ಜಿಎಂ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನದಂದು, ಜಿಲ್ಲೆಯಲ್ಲಿ “ವಾಕಥಾನ್” ಅನ್ನು ಹೆಮ್ಮೆಯಿಂದ ಘೋಷಿಸುತ್ತದೆ. ಈ ಪ್ರಭಾವಶಾಲಿ ಸಂದರ್ಭ ಸಮುದಾಯಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಜಾಗೃತಿ, ಭರವಸೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ಸಂಸತ್ತಿನ ಸದಸ್ಯರಾದ ಜಿಎಂ ಸಿದ್ದೇಶ್ವರ ಹಾಗೂ ಜಿಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್ ಆರ್ ಶಂಕಪಾಲ್ ಮತ್ತು ಅತಿಥಿಗಳಾಗಿ ಸಹ ಉಪಕಲುಪತಿಗಳಾದ ಡಾ. ಎಚ್ ಡಿ ಮಹೇಶಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿಯಾದ ಶ್ರೀ ಷಣ್ಮುಖಪ್ಪ ಹಾಗೂ ಜಿಲ್ಲಾ ಕಣ್ಗಾವಲು ಅಧಿಕಾರಿಯಾದ ಡಾ. ಗೋಪಾಲ್ ಆಗಮಿಸಲಿದ್ದಾರೆ. ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಹಾಗೂ ಜಿ ಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ ಅವರು ಮುಖ್ಯಸ್ಥರಾಗಿ ಭಾಗವಹಿಸಲಿದ್ದಾರೆ.
ಜಿಲ್ಲಾ ಸರ್ಕಾರಿ ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ ಪ್ರಾರಂಭಿಸಿ, ಜಿಎಂ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಮತ್ತು ದಾವಣಗೆರೆ ಜಿಲ್ಲೆಯ ವಿವಿಧ ಕಾಲೇಜಿನ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳು ಪಾಲ್ಗೊಂಡು ನಡಿಗೆ ಕಾರ್ಯಕ್ರಮವನ್ನು ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ ಆರಂಭಿಸಿ ನಗರದ ಜಯದೇವ ವೃತ್ತದ ಬಳಿ ಬಂದು, ಅಲ್ಲಿ ನಮ್ಮ ಗಣ್ಯ ವ್ಯಕ್ತಿಗಳಲ್ಲಿ ಒಂದಾದ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿರುವ ಕಲೆಗಾರ ಶ್ರೀ ಅರುಣ್ ಕುಮಾರ್ ಟಿ ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಗೊಳಿಸಲಿದ್ದಾರೆ. ಅಷ್ಟೇ ಅಲ್ಲದೆ ಜಾಗೃತಿಯ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗ ಚಿಹ್ನೆಗಳು, ರೋಗಲಕ್ಷಣಗಳು ಮತ್ತು ಅಪಾಯ ಸಂಭವನೀಯತೆಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಿದ್ದಾರೆ. “ಅರ್ಬುದ” ಎಂದು ಕರೆಯಲ್ಪಡುವ ಈ ಕ್ಯಾನ್ಸರ್, ಇದರಲ್ಲಿ ಕೋಶಗಳ ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿಸಿ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ ತೋರಿಸುವ ಪರಿಯನ್ನು, ಕ್ಯಾನ್ಸರ್ ರೋಗದ ವಿವಿಧ ವಿಧಗಳನ್ನು ಮತ್ತು ಅದರ ಚಿಕಿತ್ಸೆಯ ವ್ಯವಸ್ಥೆಯನ್ನು ಅದರ ಜೊತೆಯಲ್ಲಿಯೇ ರೋಗ ಸಂಬಂಧಿತ ಔಷಧೂಪಚಾರಗಳನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಅವರನ್ನು ಜಾಗೃತಗೊಳಿಸುತ್ತಿದ್ದೇವೆ.
ಅಷ್ಟೇ ಅಲ್ಲದೆ ಜಿಎಂ ಫಾರ್ಮಸಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ನಾಟಕೀಯ ರೂಪದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆಯ ಉಪಯುಕ್ತ ಮಾಹಿತಿಗಳನ್ನು ಜನಸಾಮಾನ್ಯರ ಮುಂದೆ ಪ್ರದರ್ಶಿಸಲಿದ್ದಾರೆ. ಜನಜಾಗೃತಿ ಮೇಳದಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ಸಂಬಂಧಿತ ವಿವಿಧ ಅಂಶಗಳನ್ನು ಜಾಗೃತಿ ಫಲಕಗಳಲ್ಲಿ ಅಳವಡಿಸಿ ಜನರಲ್ಲಿ ಅರಿವನ್ನು ಮೂಡಿಸಲಿದ್ದಾರೆ. ಈ ಜಾಗೃತಿ ಜಾಥ ವಿದ್ಯಾರ್ಥಿ ಭವನ ಮಾರ್ಗವಾಗಿ ಹಳೆಯ ಪಿ.ಬಿ ರಸ್ತೆಗೆ ಸೇರುವುದು ತದನಂತರ ಜಾಗೃತಿ ಮೇಳ ಹೈಸ್ಕೂಲ್ ಮೈದಾನವನ್ನು ತಲುಪಿ ಅಲ್ಲಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು.
ಕ್ಯಾನ್ಸರ್ ದಿನದಂದು ನಮ್ಮ ವಾಕಥಾನ್‌ಗೆ ಸುಸ್ವಾಗತ! ಉಜ್ವಲವಾದ, ಕ್ಯಾನ್ಸರ್ ಮುಕ್ತ ಭವಿಷ್ಯದತ್ತ ಹೆಜ್ಜೆ ಹಾಕುವಲ್ಲಿ ನಮ್ಮೊಂದಿಗೆ ಸೇರಿ. ಈ ಘಟನೆಯು ಕೇವಲ ನಡಿಗೆಗಿಂತ ಹೆಚ್ಚು; ಇದು ಜಾಗೃತಿ ಮೂಡಿಸಲು, ಬದುಕುಳಿದವರನ್ನು ಬೆಂಬಲಿಸಲು ಮತ್ತು ನಿರ್ಣಾಯಕ ಸಂಶೋಧನೆಗೆ ಸಹಾಯ ಮಾಡಲು ಸಾಮೂಹಿಕ ಹೆಜ್ಜೆಯಾಗಿದೆ. ಭಾಗವಹಿಸುವವರೊಂದಿಗೆ ಒಂದಾಗಿ, ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಪ್ರತಿ ಹೆಜ್ಜೆಯನ್ನು ಎಣಿಸೋಣ.

Leave a Reply

Your email address will not be published. Required fields are marked *

error: Content is protected !!