ಅದ್ದೂರಿಯಾಗಿ ಮಕ್ಕಳನ್ನು ಅಂಗನವಾಡಿಗೆ ಆಹ್ವಾನಿಸಿದ ಶಿಕ್ಷಕಿಯರು

ಉಚ್ಚoಗಿದುರ್ಗ: ರಾಜ್ಯದಲ್ಲಿ ಕೋವಿಡ್-19 ನಿಂದ ಅಂಗನವಾಡಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನುವ ಉದ್ದೇಶದಿಂದ ಬಂದ್ ಮಾಡಲಾಗಿತ್ತು ರಾಜ್ಯದಲ್ಲಿ ಕೋವಿಡ್ -19 ಕಡಿಮೆಯಾದ ಮೇಲೆ ನ.08 ಅಂಗನವಾಡಿಗಳನ್ನು ಆರಂಭಿಸಬೇಕು ಎಂದು ಸರ್ಕಾರದ ಆದೇಶದಂತೆ ಸೋಮವಾರ ಗ್ರಾಮದ ಎಲ್ಲಾ ಅಂಗನವಾಡಿಕೇಂದ್ರದಲ್ಲಿ ಬಾಳೆಕಂಬ ಮಾವಿನ ಸೊಪ್ಪು ಹಾಗೂ ಇತರೆ ಹೂವುಗಳ ಅಲಂಕಾರ ಮಾಡಿ ಅಂಗನವಾಡಿ ಶಿಕ್ಷಕಿಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮಕ್ಕಳನ್ನು ಹೂವು ನೀಡಿ ಅಂಗನವಾಡಿಗೆ ಅದ್ದೂರಿಯಾಗಿ ಆಹ್ವಾನಿಸಿದರು.