ಮುರುಘಾ ಶರಣರ ವಿರುದ್ದ ಪೋಕ್ಸೋ ಕೇಸ್ ಪ್ರಕರಣ.! ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ – ಬಾಡದ ಆನಂದರಾಜ್
ದಾವಣಗೆರೆ: ನಾಡಿನ ಪ್ರತಿಷ್ಠಿತ ಮಠಗಳಲ್ಲೊಂದಾದ ಚಿತ್ರದುರ್ಗ ಮುರುಘ ಮಠದ ಪೀಠಾಧಿಪತಿಯಾಗಿರುವ ಶ್ರೀ ಡಾ ಶಿವಮೂರ್ತಿ ಮುರುಘ ಶರಣರ ಜನಪ್ರಿಯತೆ ಸಹಿಸಿಕೊಳ್ಳದೇ ಪಟ್ಟಭದ್ರ ಹಿತಾಸಕ್ತಿಗಳು ಅಮಾಯಕರನ್ನಿಟ್ಟುಕೊಂಡು ಶರಣರ ಮೇಲೆ ಪೋಕ್ಸೋ ಕಾಯಿದೆ ಕೇಸ್ ದಾಖಲೆಯಾಗುತ್ತಿರುವುದನ್ನ ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಖಂಡಿಸಿದ್ದಾರೆ.
ಮೂರು ದಶಕಗಳಿಂದ ಶೋಷಿತರ ದೀನದಲಿತರ ಅಂಧಮಕ್ಕಳ ವಿಧೆವೆಯರ ಆರಾಧ್ಯ ದೈವರಾಗಿರುವ ಚಿತ್ರದುರ್ಗದ ಮುರುಘ ಶರಣರ ಜನಪರ ಆಡಳಿತ ಹಾಗೂ ಬಸವಣ್ಣನವರ ಅಂಬೇಡ್ಕರ್ ರವರ ಆಶಯದಂತೆ ಹಗಲಿರುಳು ಶ್ರಮಿಸುತ್ತಿರುವ ಶರಣರಿಗೆ ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ಕಿರುಕುಳ ನೀಡುತ್ತಿದ್ದು ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಸತ್ಯಾತತೆಯನ್ನ ಹೊರ ತರಬೇಕು ಎಂದು ಬಾಡದ ಆನಂದರಾಜ್ ಒತ್ತಾಯಿಸಿದ್ದಾರೆ.
ಹಿಂದಿನಿಂದಲೂ ಶೋಷಿತರ ಪರವಾಗಿರುವವರನ್ನ ಒಂದಲ್ಲಾ ಒಂದು ರೀತಿ ಪಿತೂರಿ ನಡೆಸುತ್ತಿದ್ದು ಇದು ಶೋಭೆಯಲ್ಲ ನಾವುಗಳು ಬಸವಣ್ಣನವರನ್ನ ಅಂಬೇಡ್ಕರ್ ರವರನ್ನ ಕಣ್ಣಾರೆ ನೋಡಿಲ್ಲ ಡಾ.ಶಿವಮೂರ್ತಿ ಶರಣರಲ್ಲಿ ಅವರ ಆದರ್ಶಗಳನ್ನು ನೋಡುತ್ತಿದ್ದೇವೆ. ಶರಣರ ಮೇಲೆ ಈ ಅಫಾದನೆಯಿಂದ ದೇಶದ ಕೋಟ್ಯಾಂತರ ಭಕ್ತರಗಳಿಗೆ ನೋವು ತರಿಸಿದೆ ಆದಷ್ಟು ಬೇಗ ರಾಜ್ಯ ಸರ್ಕಾರ ಈ ಘಟನೆಯಿಂದಿರುವ ಕುತಂತ್ರಿಗಳನ್ನು ಬಯಲಿಗೆಳೆಯಬೇಕೇಂದು ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಒತ್ತಾಯಿಸಿದ್ದಾರೆ.