ದಾವಣಗೆರೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ 14-15 ಜನರ ವಿರುದ್ದ ಪ್ರಕರಣ.! ಗರುಡ ವಾಯ್ಸ್ ಫಲಶೃತಿ
ದಾವಣಗೆರೆ :ದಾವಣಗೆರೆಯ ಸ್ವಾಮಿ ವಿವೇಕಾನಂದ ಬಡಾವಣೆಯ 6ನೇ ಮುಖ್ಯ ರಸ್ತೆಯಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಸುಮಾರು 14-16ಜನರ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಕಳೆದ ಮಾ.1ರಂದು ರಾತ್ರಿ 1.15ಗಂಟೆಗೆ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ವಶಕ್ಕೆ ಪಡೆದ ವ್ಯಕ್ತಿಗಳ ಬಗ್ಗೆಯಾಗಲೀ, ಸ್ವತ್ತಿನ ಬಗ್ಗೆಯಾಗಲೂ ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ.
ಕಳೆದ ಫೆ.28ರಂದು ರಾತ್ರಿ 11.45ಕ್ಕೆ ಗಸ್ತಿನಲ್ಲಿದ್ದ ವಿದ್ಯಾನಗರ ಠಾಣೆಯ ಸಿ.ಪಿ.ಸಿ. ನಾಗರಾಜ್ ಕೂಲೇರ ಅವರು ನೀಡಿರುವ ದೂರಿನಲ್ಲಿ ಸಾರಾಂಶದಲ್ಲಿ, ತಾವು ಶಾಮನೂರು ಆಂಜನೇಯ ಸ್ವಾಮಿ ರಥೋತ್ಸವದ ಪ್ರಯುಕ್ತ ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ 14-16ಜನ ಕುಳಿತು ಇಸ್ಪೀಟ್ ಆಡುತ್ತಿದ್ದರು. ಇದನ್ನು ಖಚಿತ ಪಡಿಸಿಕೊಂಡು 11.45ಕ್ಕೆ ಠಾಣೆಗೆ ಬಂದ ದೂರು ನೀಡಿರುವುದಾಗಿ ಹೇಳಲಾಗಿದೆ.
ನಂತರ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಮಾ.1ರಂದು ರಾತ್ರಿ 1.15ಕ್ಕೆ ಪ್ರಕರಣ ದಾಖಲು ಮಾಡಲಾಗಿದೆ.
ಮೊನ್ನೆಯಷ್ಟೇ ರಾಷ್ಟ್ರೀಯ ಹೆದ್ದಾರಿ ಬಳಿಯ ರಾಸ್ತಾ ಹೋಟೆಲ್ ಬಳಿಯ ಅಂಬೇಡ್ಕರ್ ಸಮುದಾಯ ಬಳಿ ಇಸ್ಪೀಟ್ ಜೂಜಾಟ ನಡೆಯುತ್ತಿದ್ದರೂ, ವಿದ್ಯಾನಗರ ಪೊಲೀಸರು ಜಾಣ ಕುರುಡು ಪ್ರದರ್ಶಿಸಿದ್ದರ ಬಗ್ಗೆ ಗರುಡ ವಾಯ್ಸ್ ಬೆಳಕು ಚೆಲ್ಲಿತ್ತು. ಇದೀಗ ಎಚ್ಚೆತ್ತ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇದು ಗರುಡವಾಯ್ಸ್ ಫಲಶೃತಿ.