ಬೆಂಗಳೂರಿನಲ್ಲಿ ಪೋಲೀಸರಿಗಾಗಿ ಹೈಟೆಕ್ ಕೋವಿಡ್ ಕೇರ್ ಸೆಂಟರ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕುಟುಂಬಸ್ಥರಿಗೆ ಇಲ್ಲಿ ಚಿಕಿತ್ಸೆ
ಹೆಚ್ ಎಂ ಪಿ ಕುಮಾರ್.
ಬೆಂಗಳೂರು: ಸದ್ಯ ಭಾರತ ದೇಶದಲ್ಲಿ ಕೋವಿಡ್ 19 ಕೊರೋನ ಮಾರಕ ವೈರಸ್, ಸುನಾಮಿಯಂತೆ ದೇಶದ ತುಂಬೆಲ್ಲ ವೇಗವಾಗಿ ಹಬ್ಬಿದ್ದು. ಅದರಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವುದು ಅತ್ಯಂತ ದುಃಖಕರ ವಿಷಯ. ಕೊರೋನ ಎರಡನೇ ಅಲೆ ಅತೀ ಅಪಾಯಕಾರಿ ಎಂಬುದು ನಮಗೆಲ್ಲ ಈಗಾಗಲೇ ಕಂಡಿರುವ ಸಾವು ನೋವುಗಳಿಂದ ಮನವರಿಕೆಯಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.ಇಂತಹ ಕೊರೋನ @ ಕೋವಿಡ್ 19 ರೋಗ ಮುಕ್ತ ಭಾರತ ನಿರ್ಮಾಣದಲ್ಲಿ ಅತೀ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್ ಗಳಲ್ಲಿ ಪೊಲೀಸ್ ಇಲಾಖೆ ಬಹುಮುಖ್ಯ ಭಾಗವಾಗಿರುತ್ತದೆ.
ಪೊಲೀಸ್ ಇಲಾಖೆಯ ಪೊಲೀಸ್ ರವರು ಏನು ದೇವ ಮಾನವರಲ್ಲ.
ಪೊಲೀಸ್ ಸಹ ಎಲ್ಲರಂತೆ ಸಾಮಾನ್ಯರು. ಮುಂದೆ ಈ ಕೋವಿಡ್ ಮಹಾಮಾರಿ ಯಿಂದ ಬಂದು ಒದಗುವ ವಿಪತ್ತು ಮತ್ತು ಆಪತ್ತುಗಳನ್ನು ಮನಗಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ರವರು ಪೊಲೀಸ್ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್ ಅದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಅವರ ಕುಟುಂಬ ಕ್ಕೆ ಆತ್ಮಸ್ಥೈರ್ಯ ತುಂಬಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆಶಯದೊಂದಿಗೆ ಕೋವಿಡ್ ಕೇರ್ ಸೆಂಟರ್ ಅನ್ನು ನಿರ್ಮಾಣದ ಸೂಕ್ತ ನಿರ್ದೇಶನವನ್ನು ವೈಟ್ ಫೀಲ್ಡ್ ವಿಭಾಗ ಉಪ ಪೊಲೀಸ್ ಆಯುಕ್ತ ದೇವರಾಜ್ ರವರಿಗೆ ತಿಳಿಸಿದ್ದರು.
ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ದೇವರಾಜ್ ಸಿಸಿಸಿ ನಿರ್ಮಾಣದ ರುವಾರಿ:
ದೇವರಾಜ್ ಉಪ ಪೊಲೀಸ್ ಆಯುಕ್ತರು ರವರು ಮಾನ್ಯ ಪೊಲೀಸ್ ಆಯುಕ್ತರು ನೀಡಿದ ನಿರ್ದೇಶನದ ಮೇರೆಗೆ ತಮ್ಮ ವ್ಯಾಪಿಯಲ್ಲಿ ಇರುವ ವೈಟ್ ಫೀಲ್ಡ್ ರೈಸಿಂಗ್ ಟೀಮ್, ವೈದೇಹಿ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ, ಸ್ಮೈಲ್ಸ್ ಆಸ್ಪತ್ರೆ, ಇವರ ಸಹಯೋಗದಲ್ಲಿ ಶ್ರೀ ಮತಿ ಕಿರಣ್ ಮಜುಮ್ದಾರ್ ರವರ ಸಹಾಯದೊಂದಿಗೆ ಕಾಡುಗೋಡಿ ಪೊಲೀಸ್ ಠಾಣೆ ಹಿಂಭಾಗ ಹೊಸದಾಗಿ ನಿರ್ಮಾಣ ವಾಗಿರುವ ಪೊಲೀಸ್ ವಸತಿ ಗೃಹ ಸಂಕಿರ್ಣದಲ್ಲಿ ದಿನಾಂಕ ಏಪ್ರಿಲ್ 30 ರ ಸಂಜೆ ಗಂಟೆಗೆ ಉದ್ಘಾಟನೆ ಮಾಡಲಾಯಿತು.
ಪೊಲಿಸ್ ಕೋವಿಡ್ ಕೇರ್ ಸೆಂಟರ್ ನಲ್ಲಿ ಏನಿರುತ್ತೆ:
ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಅತ್ಯುತ್ತಮ ಬೆಡ್, ಆಕ್ಸಿಜನ್ ಸಿಲೆಂಡರ್, ಕೋವಿಡ್ ಸಂಬಂಧ ಅಗತ್ಯ ಬೀಳುವಂತ ಎಲ್ಲಾ ತರಹದ ಮಾತ್ರೆಗಳು, ಸುಸಜ್ಜಿತ ವೆಂಟಿಲೆಟರ್, ನುರಿತ ವೈದ್ಯಧಿಕಾರಿಗಳು ಮತ್ತು ದಾದಿಯರು, ಸಿಬ್ಬಂದಿಗಳು,ಸ್ವಚ್ಛತೆ ಕಾರ್ಯಕ್ಕೆ ಸುಮಾರು ಸಿಬ್ಬಂದಿಗಳು, ಉಸ್ತುವಾರಿ ನೋಡಿಕೊಳ್ಳಲು ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು,ರೋಗಿಗಳಿಗೆ ಪ್ರತ್ಯೇಕ ಕೋಣೆಗಳು, ಉತ್ತಮ ಬಿಸಿ ನೀರಿನ ವ್ಯವಸ್ಥೆ, ಅರೋಗ್ಯಕರ ಬಿಸಿ ಊಟದ ವ್ಯವಸ್ಥೆ, ಮನವ ವಾಸಕ್ಕೆ ಅತೀ ಯೋಗ್ಯವಾಗಿ ಯಾವ ದೊಡ್ಡ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಯಾವುದೇ ಕೊರತೆ ಬಾರದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ವೈರಸ್ ತುಂಬಾ ಅಪಾಯಕಾರಿಯಾಗಿದ್ದು. ಕೋವಿಡ್ ವಾರಿಯರ್ಸ್ ಅದ ನಾವು ನೀವೆಲ್ಲರೂ ಸಮಾಜ ಸೇವೆಗೆ ಅತೀ ಅವಶ್ಯಕವಾಗಿ ಬೇಕಾಗಿರುವುದರಿಂದ ಮತ್ತು ತಮ್ಮ ತಮ್ಮ ಕುಟುಂಬಕ್ಕೆ ನಾವೇ ಆಧಾರಸ್ತಂಭ ವಾಗಿದ್ದು ತುಂಬಾ ಜಾಗ್ರತೆಯಿಂದ ಕೊರೂನ ಮುಕ್ತ ಭಾರತಕ್ಕಾಗಿ ಶ್ರಮಿಸೋಣ ಎಂದು ಪೊಲೀಸ್ ಆಯುಕ್ತರು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ ತುಂಬಿ ಅವರ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಆಶಯದೊಂದಿಗೆ ನಗರ ಪೊಲೀಸ್ ಮತ್ತು ಕುಟುಂಬ ದವರಿಗಾಗಿ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟನೆ ಮಾಡಲಾಯಿತು.
ಕೋವಿಡ್ ಕೇರ್ ಸೆಂಟರ್ ಕಾಡುಗೋಡಿ ಯಲ್ಲಿ ಉದ್ಘಾಟನೆ ಸಮಾರಂಭ ಸರಳವಾಗಿ ಪೊಲೀಸ್ ಆಯುಕ್ತರು ಬೆಂಗಳೂರು ನಗರ ರವರು ಟೇಪ್ ಕತ್ತರಿಸುವ ಮೂಲಕ ನೆರವೇರಿಸಿದ್ದು. ಈ ಕಾರ್ಯಕ್ರಮಕ್ಕೆ ಶ್ರೀ ಮುರುಗನ್ ಅಪರ ಪೊಲೀಸ್ ಆಯುಕ್ತರು ಪೂರ್ವ ವಲಯ. ಉಪ ಪೊಲೀಸ್ ಆಯುಕ್ತರು ಶ್ರೀ ದೇವರಾಜು ವೈಟ್ ಫೀಲ್ಡ್ ವಿಭಾಗ. ಶ್ರೀ ಶರಣಪ್ಪ ಉಪ ಪೊಲೀಸ್ ಆಯುಕ್ತರು ಪೂರ್ವ ವಿಭಾಗ. ಮತ್ತು ಶ್ರೀ ಮನೋಜ್ ಕುಮಾರ್ ಸಹಾಯಕ ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ವಿಭಾಗ. ಶ್ರೀ ಪಂಪಾಪತಿ ಸಹಾಯಕ ಉಪ ಪೊಲೀಸ್ ಆಯುಕ್ತರು ಮಾರತಹಳ್ಳಿ ವಿಭಾಗ, ವೈಟ್ ಫೀಲ್ಡ್ ವಿಭಾಗದ ಆರಕ್ಷಕ ನೀರಿಕ್ಷಕರು ಮತ್ತು ಸಂಚಾರ ಪೂರ್ವ ವಿಭಾಗ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.