ರಿಂಗ್ ರೋಡ್ ಕೊಲೆ ಭೇದಿಸಿದ ಪೊಲೀಸ್: ಪ್ರಿಯಕರ ನೊಂದಿಗೆ ಸೇರಿ ಗಂಡನನ್ನ ಕೊಂದ ಹೆಂಡತಿ

ದಾವಣಗೆರೆ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಗೆದಿಬ್ಬ ವೃತ್ತದ ಬಳಿಯ ಬುದ್ಧ ಬಸವ ನಗರದ ಶ್ವೇತಾ (28) ಹಾಗೂ ಅವಳ ಪ್ರಿಯಕರ ಚಂದ್ರಶೇಖರ್ (29) ಬಂಧಿತರು.

ಎಸ್.ಎಸ್. ಲೇಔಟ್‌ ಎ ಬ್ಲಾಕ್‌ನ ರಿಂಗ್ ರಸ್ತೆಯ ಖಾಲಿ ನಿವೇಶನದಲ್ಲಿ ಸುಮಾರು 35 ವರ್ಷದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಹೋಗಿದ್ದರು. ಹೊಯ್ಸಳ ವಾಹನದ ಸಿಬ್ಬಂದಿಗಳು ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದ.

ಈ ಕುರಿತು ದೂರ ದಾಖಲಿಸಿಕೊಂಡಿದ್ದ ವಿದ್ಯಾನಗರ ಪೊಲೀಸರು ತನಿಖೆ ನಡೆಸಿ, ಮೃತ ವ್ಯಕ್ತಿಯ ಬೆರಳು ಮುದ್ರೆಯ ಸಹಾಯದಿಂದ ಮೃತ ವ್ಯಕ್ತಿಯು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಬ ೈಚವಳ್ಳಿಯ ಮಹಾಂತೇಶ್ (36) ಎಂದು ಪತ್ತೆ ಮಾಡಿದ್ದರು.

ತನಿಖೆ ಮುಂದುವರೆಸಿದ ಪೊಲೀಸರ ತಂಡವು ಇದೀಗ ಪತ್ನಿ ಹಾಗೂ ಪ್ರಿಯಕರನನ್ನು ಬಂದಿಸಿದ್ದಾರೆ. ಅವರಿಂದ ಕೊಲೆ ಮಾಡಲು ಬಳಸಿದ ಒಂದು ಲಕ್ಷ ರೂ. ಬೆಲೆ ಬಾಳುವ 2 ದ್ವಿಚಕ್ರ ವಾಹನಗಳು, 2 ಮೊಬೈಲ್ ಫೋನ್‌ಗಳು, 1 ಚಾಕು, ಬಿಯರ್ ಬಾಟಲ್‌ಗಳು, ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ವಿದ್ಯಾನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ ಸಿ ಶೇತಸನದಿ, ಪಿಎಸ್‌ಐ ರೇಣುಕಾ ಜಿ.ಎಂ., ಎಂ.ಎಸ್. ದೊಡ್ಡಮನಿ, ಮಂಜುನಾಥ ಕಲ್ಲದೇವರು ಸಿಬ್ಬಂದಿಗಳಾದ ಆಂಜನೇಯ, ಮಜೀದ್, ಸುರೇಶ್, ರಾಘವೇಂದ್ರ, ಮಾರುತಿ, ರಮೇಶ್ ನಾಯ್ಕ, ನಟರಾಜ್, ಅಶೋಕ್, ಮಲ್ಲಿಕಾರ್ಜುನ, ಬಾಲಾಜಿ, ಹಾಗೂ ವಿದ್ಯಾನಗರದ ಎ.ಎಸ್.ಐ ನಾಗರಾಜ್, ರಾಜಪ್ಪ ಮಡಿವಾಳರ್, ಗೋಪಿನಾಥ ನಾಯ್ಕ, ಯೋಗೀಶ್ ನಾಯ್ಕ, ಮಂಜುನಾಥ ಬಿ.ವಿ, ಗುಡ್ಡಪ್ಪ, ಬಸವರಾಜ್, ಕನ್ನಪ್ಪ, ನಾಗರಾಜ ಕೂಲೇರ, ರೋಜಾ, ಸರಸ್ವತಿ ಮತ್ತು ಎಫ್.ಪಿ.ಬಿ ಘಟಕದ ಸಿಬ್ಬಂದಿಗಳಾದ ಅಕ್ತರ್, ನಾಗರಾಜ ಕುಂಬಾರ, ಮಾರುತಿ, ವಿರೇಶ್, ಚಾಲಕರಾದ ರಾಮಚಂದ್ರಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ರವರನ್ನು ಎಸ್ಪಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ ಶ್ಲ್ಯಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!