ಯುಗಾದಿ ಹಬ್ಬ ಆಚರಿಸಲು ಪೊಲೀಸರಿಗಿಲ್ಲ ಸಂಬಳದ ಭಾಗ್ಯ

ಮಾರ್ಚ್ ತಿಂಗಳ ಸಂಬಳವಿಲ್ಲದೆ ಹಬ್ಬ ಆಚರಿಸೋದು ಹೇಗೆ ಅಂತಿದ್ದಾರೆ ಪೊಲೀಸ್ ಸಿಬ್ಬಂದಿ
ಹೆಚ್ ಎಂ ಪಿ ಕುಮಾರ್.
ದಾವಣಗೆರೆ : ಹಗಲು ರಾತ್ರಿ ಎನ್ನದೇ ಸರ್ಕಾರ ಪೊಲೀಸರನ್ನ ದುಡಿಸಿಕೊಳ್ತಾರೆ. ಆದರೆ ಅವರಿಗೆ ಸಿಗಬೇಕಾದ ಸರಿಯಾದ ಸೌಲಭ್ಯ ಮಾತ್ರ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕೊವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಅವರೂ ಕೂಡ ಬಂದೋಬಸ್ತ್ ನಲ್ಲಿ ಬಿಡುವಿಲ್ಲದೆ ಕರ್ತವ್ಯ ಮಾಡುತ್ತಿದ್ದಾರೆ.
ಇದೇ ತಿಂಗಳು ಯುಗಾದಿ ಹಬ್ಬ ಇದೆ. ಆದರೆ ಪೊಲೀಸರಿಗೆ ಮಾರ್ಚ್ ತಿಂಗಳ ಸಂಬಳ ಬಂದಿಲ್ಲ. ಹೀಗಾಗಿ ಮಾರ್ಚ್ ತಿಂಗಳ ಸಂಬಳ ಆಗದೇ ಹಬ್ಬ ಆಚರಿಸೋದು ಹೇಗೆ ಅಂತ ಪೊಲೀಸ್ ಸಿಬ್ಬಂದಿ ನೊಂದಿದ್ದಾರೆ. ಪ್ರತಿ ತಿಂಗಳ 5 ನೇ ತಾರೀಖಿನೊಳಗೆ ಸಂಬಳ ಆಗುತ್ತಿತ್ತು. ಈ ಬಾರಿ ಆರ್ಥಿಕ ವರ್ಷದ ಕೊನೆ ತಿಂಗಳು ಅಂತ ತಡವಾಗಿದೇ ಎನ್ನಲಾಗುತ್ತಿದೆ.
ಹೀಗೆ ಸಂಬಳ ತಡವಾದ್ರೆ ನಾವು ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸೋದು ಹೇಗೆ,ನಮಗೂ ಹೆಂಡ್ತಿ ಮಕ್ಕಳು ಇದ್ದಾರೆ ಅವರಿಗೂ ಕಷ್ಟ ಇರುತ್ತೆ ಅಂತ ಸರ್ಕಾರಕ್ಕೆ ಗೊತ್ತಿಲ್ವ ಅಂತಿದ್ದಾರೆ ಕೆಲವು ಕೆಳ ಹಂತದ ಪೊಲೀಸ್ ಸಿಬ್ಬಂದಿ. ಸೋಮವಾರದವರೆಗೂ ಸಂಬಳ ಆಗುತ್ತೋ ಇಲ್ವೋ ಗೊತ್ತಿಲ್ಲ. ಸೋಮವಾರ ಸಂಬಳ ಬಂದ್ರೂ ಬಿಡುವಿಲ್ಲದ ಕೆಲಸದ ಮದ್ಯೆ ಹೆಂಡತಿ ಮಕ್ಕಳಿಗೆ ಬಟ್ಟೆ ಖರೀದಿ,ಮನೆಗೆ ಅಗತ್ಯ ವಸ್ತುಗಳ ಖರೀದಿ ಮಾಡೋದು ಯಾವಾಗ.
ಕಳೆದ ವರ್ಷ ಕೊವಿಡ್ ಲಾಕ್ ಡೌನ್ ಹಿನ್ನೆಲೆ ಹಬ್ಬವೇ ಇಲ್ಲದಂತಾಗಿತ್ತು ಆದರೆ ಈ ಬಾರಿ ಸಂಬಳವಿಲ್ಲದೆ ಯುಗಾದಿ ಹಬ್ಬವೇ ಇಲ್ಲದಂತಾಗಿದೆ ಎಂದು ಅಳಲು ತೊಡಿಕೊಂಡು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.
ಕೆಲ ಸಾರ್ವಜನಿಕರು ಆಡುಬಾಷೆಯಲ್ಲಿ, ಪೊಲೀಸ್ ರಿಗೆ ಯಾಕಪ್ಪಾ ಸಂಬಳ, ಅವರಿಗೆ ಗಿಂಬಳಾನೆ, ಜಾಸ್ತಿ ಇರುತ್ತೆ, ಅಂತಾ ಮಾತನಾಡಿಕೊಳ್ಳಬಹುದು, ಆದ್ರೆ ಸತ್ಯದ ಮಾರ್ಗದಲ್ಲಿ ಆನೇಕ ಪೊಲೀಸ್ ನವರು ತೆರೆಮರೆಯಲ್ಲಿ ಸಂಬಳವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ ಎಂಬುದೂ ಕೂಡ ಆಷ್ಟೇ ಸತ್ಯ.
ಒಟ್ಟಾರೆ ಆದಷ್ಟು ಬೇಗ ಸರ್ಕಾರ ಪೊಲೀಸ್ ನವರಿಗೆ ಸಂಬಳವನ್ನ ನೀಡಲಿ ಎಂಬುದು ನಮ್ಮೆಲ್ಲರ ಆಶಯ.