ವಿಚಾರಣೆಗೆ ಕರೆತಂದ ವ್ಯಕ್ತಿ ಸಾವು.!? ಎಸ್ ಪಿ ರಿಷ್ಯಂತ್, ಸಿ ಐ ಡಿ ಗೆ ಕೇಸ್ ಕೊಡ್ತೀವಿ ಎಂದಿದ್ದೇಕೆ.? ಕೆಸ್ ವಿಚಾರದಲ್ಲಿ ಗುಪ್ತ್ ಗುಪ್ತ್ ಮೀಟಿಂಗ್.!?

ದಾವಣಗೆರೆ: ದಾವಣಗೆರೆಯಲ್ಲಿ ಮತ್ತೊಂದು ಲಾಕ್ ಅಪ್ ಡೆತ್ ಆಗಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ತಾಲ್ಲೂಕಿನ ಬಹೂದ್ದರಘಟ್ಟ ಗ್ರಾಮದ ವ್ಯಕ್ತಿ ಕುಮಾರ್ (35) ಎಂಬಾತನನ್ನು ಇಲ್ಲಿನ ಸಿಇಎನ್ ಅಪರಾಧ ಠಾಣೆ ಪೊಲೀಸರು ಕರೆತಂದಿದ್ದು, ವಿಚಾರಣೆ ನಡೆಸುವ ವೇಳೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಕುಮಾರ್ ಮೃತಪಟ್ಟಿದ್ದು, ಪೊಲೀಸರು ಮನಬಂದಂತೆ ಥಳಿಸಿರುವ ಕಾರಣ ಆತ ಸಾವನ್ನಪ್ಪಿದ್ದಾನೆ ಎಂಬ ಆರೋಪ ಬಂದಿದೆ. ಇದಕ್ಕೆ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರ ನೇರ ಹೊಣೆಯಾಗಿದೆ, ಕೂಡಲೇ ಅವರನ್ನು ಬಂಧಿಸುವಂತೆ ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ.
ಚಿಗಟೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ ಪಿ ರಿಷ್ಯಂತ್ ಪ್ರತಿಕ್ರಿಯೆ: ಪ್ರಕರಣ ಕುರಿತಂತೆ ಎಫ್ ಐ ಆರ್ ಹಾಕಿ ತನಿಖೆ ನಡೆಸಲಾಗುವುದು. ಅಗತ್ಯ ಬಿದ್ದರೆ ಸಿಐಡಿಗೆ ತನಿಖೆಗೊಪ್ಪಿಸಲಾಗುವುದು ಎಂದಿದ್ದಾರೆ.