ಪೊಲೀಸರೇ ಎಚ್ಚರ…ಕೆಲಸ..ಕೆಲಸ..ಅಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ-ಕೆಲಸ ಅಂತ ನಿರ್ಲಕ್ಷ್ಯ ಮಾಡಿ ಮನೆ ಮಂದಿಗೆಲ್ಲ ಕೊರೊನಾ ಸೋಂಕು ತರಸಿಕೊಂಡ ಇನ್ಸ್ ಪೆಕ್ಟರ್

ಬೆಂಗಳೂರು : ಕೊರೊನಾದಿಂದ ರಾಜ್ಯದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅದ್ರಲ್ಲೂ ಪೊಲೀಸರ ಸಾವಿನ ಸಂಖ್ಯೆ 120 ಏರಿಕೆ ಕಂಡಿದೆ. ಪ್ರತಿನಿತ್ಯ ಕೆಲಸದ ಹಿನ್ನಲೆ ಹೊರಗಡೆ ಓಡಾಡುವ ಹಾಗೂ ಬಂದೋಬಸ್ತ್ ಮಾಡುವ ಪೊಲೀಸರು ಸೋಂಕಿಗೆ ತುತ್ತಾಗುತ್ತಿದ್ದಾರೆ..
ಅದೇ ರೀತಿ ಕೆಲಸ ಕರ್ತವ್ಯ ಅಂತ ಇರುವ ಪೊಲೀಸರು ತಾವು ಸಾಯುವುದಲ್ಲದೇ ತಮ್ಮ ಕುಟುಂಬದವರಿಗೂ ಕೊರೊನಾ ಸೋಂಕು ಹರಡುವ ಪರಿಸ್ಥಿತಿ ಉಂಟಾಗಿದೆ. ಅದೇ ರೀತಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಕೆಲಸ ಕರ್ತವ್ಯ ಅಂತ ಓಡಾಡಿ ಈಗ ಕುಟುಂಬ ಸಮೇತ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ..
ಒಬ್ಬ ಇನ್ಸ್ ಪೆಕ್ಟರ್ ರಿಂದ ಸುಮಾರು 8 ಮಂದಿಗೆ ಸೋಂಕು ತಗಲಿದೆ. ಪೊಲೀಸ್ ಇನ್ಸ್ ಪೆಕ್ಟರ್ ಪತ್ನಿ ಇಬ್ಬರು ಮಕ್ಕಳು ಹಾಗೂ ತಂದೆ ತಾಯಿ ಸೇರಿ 8 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ..
ನನ್ನ ಕಡೆಯಿಂದಲೇ ಎಲ್ಲರಿಗೂ ಕೊರೊನಾ ಹರಡಿದೆ ಎಂದು ನೊಂದುಕೊಂಡಿದ್ದಾರೆ. ಈ ಮಧ್ಯೆ ತಂದೆಯನ್ನು ಆ ಪೊಲೀಸ್ ಇನ್ಸ್ ಪೆಕ್ಟರ್ ಕಳೆದುಕೊಂಡಿದ್ದಾರೆ..ನನ್ನಿಂದಲೇ ತಂದೆಗೆ ಹರಡಿದೆ ಎಂಬ ನೋವು ಆ ಪೊಲೀಸ್ ಇನ್ಸ್ ಪೆಕ್ಟರ್ ಮನಸ್ಸಲ್ಲಿ ಕೊರೆಯುತ್ತಿದೆ.
ಎಂತಹ ದುರಂತ ಅಂದ್ರೆ ಇಳಿವಯಸ್ಸಿನಲ್ಲಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಸಂದರ್ಭದಲ್ಲಿ ಕೊರೊನಾದಿಂದ ಸಾಯುವ ಪರಿಸ್ಥಿತಿ ಬಂದೋದಗಿದೆ ಎಂದು ಪಶ್ಚಾತ್ತಾಪ ಪಡುವಂತಾಗಿದೆ.
ಇದು ಕೇವಲ ಒಬ್ಬ ಇನ್ಸ್ ಪೆಕ್ಟರ್ ಪರಿಸ್ಥಿತಿಯಲ್ಲಾ ಇಡೀ ರಾಜ್ಯದ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ,ಅಧಿಕಾರಿಗಳ ವ್ಯಥೆಯಾಗಿದೆ..
ಜನರ ರಕ್ಷಣೆಗೆ ನಿಂತ ಪೊಲೀಸರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದೇ ಕಷ್ಟ ಸಾಧ್ಯವಾಗಿದೆ. ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೇಫ್ ಆಗಿರುವಂತೆ ನಮ್ಮ ಮನವಿ.