Police: ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ, ವಾಹನ ಮಾಲೀಕರಿಗೆ 25,000/- ದಂಡ, ಬಿಸಿ ಮುಟ್ಟಿಸಿದ ಕೆಟಿಜೆ ನಗರ ಪೋಲಿಸ್

IMG-20250315-WA0012

ದಾವಣಗೆರೆ: (Police) ದಾವಣಗೆರೆ ನಗರದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲು ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ರವರ ಸೂಚನೆಯಂತೆ ನಗರದ ಡಿವೈಎಸ್ಪಿ ಶ್ರೀ ಶರಣಬಸವೇಶ್ವರ ಬೀಮರಾವ್ ರವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.

ದಿನಾಂಕ 06-03-2025 ರಂದು ಸಂಜೆ ಸಮಯದಲ್ಲಿ ದಾವಣಗೆರೆ ನಗರದ ಕೆಬಿ ಬಡಾವಣೆ ಮುಖ್ಯ ರಸ್ತೆಯಲ್ಲಿ ಶ್ರೀ ಸುನೀಲ್ ಕುಮಾರ ಹೆಚ್ ಎಸ್, ಪಿಐ ಕೆಟಿಜೆ ನಗರ ಪೊಲೀಸ್ ಠಾಣೆರವರು ತಮ್ಮ ಸಿಬ್ಬಂದಿಗಳೊಂದಿಗೆ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಐಎಂವಿ ಪ್ರಕರಣಗಳನ್ನು ದಾಖಲು ಮಾಡುತ್ತಿರುವ ಸಮಯದಲ್ಲಿ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಅಪ್ರಾಪ್ತ ಬಾಲಕ ಚಲಾಯಿಸಿಕೊಂಡು ಬಂದಿದ್ದು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ನೀಡಿದ್ದರ ಬಗ್ಗೆ ಸದರಿ ಆಕ್ಟಿವ್ ಹೊಂಡ ಬೈಕ್ ಅನ್ನು ಜಪ್ತು ಪಡಿಸಿಕೊಂಡು ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮಾನ್ಯ 3ನೇ PRLC & JMFC ದಾವಣಗೆರೆ ನ್ಯಾಯಾಲಯಕ್ಕೆ ಆಕ್ಟಿವ್ ಹೊಂಡ ಬೈಕ್ ಮಾಲೀಕರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿರುತ್ತದೆ.

ಮಾನ್ಯ ನ್ಯಾಯಾಲಯವು ದಿನಾಂಕ 14-03-2025 ರಂದು ಆರೋಪಿತ ಆಕ್ಟಿವ್ ಹೊಂಡ ಬೈಕ್ ಮಾಲೀಕರು ತಮ್ಮ ಆಕ್ಟಿವ್ ಹೊಂಡ ಬೈಕ್ ಅನ್ನು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ಸದರಿ ವಾಹನದ ಮಾಲಿಕರಿಗೆ 25000/-ರೂ ದಂಡ ಹಾಗು ಸದರಿ ವಾಹನದ ನೊಂದಣಿಯನ್ನು 1 ವರ್ಷದವರೆಗೆ ರದ್ದು ಪಡಿಸಿರುತ್ತದೆ. ವಾಹನ ಚಾಲನೆ ಮಾಡಿಕೊಂಡು ಬಂದ ಅಪ್ರಾಪ್ತ ಬಾಲಕನಿಗೆ 25ವರ್ಷ ತುಂಬುವರೆಗೂ ಚಾಲನಾ ಪರವಾನಿಗೆಯನ್ನು ನೀಡದಂತೆ ಶಿಕ್ಷೆ ವಿದಿಸಲಾಗಿರುತ್ತದೆ.

ಆದ್ದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ / ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ, ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ರವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!