ಬೆಳ್ತಂಗಡಿ: ಅಕ್ರಮ ಕಸಾಯಿಖಾನೆ ಮತ್ತು ಜಾನುವಾರು ಸಾಗಾಟ ಸ್ಥಳಕ್ಕೆ ಪೊಲೀಸರು ದಾಳಿ, ಆರೋಪಿಗಳು ಪರಾರಿ

ಹೈಟೆಕ್‌, ವೇಶ್ಯಾವಾಟಿಕೆ, ಅಡ್ಡೆ, ಪೊಲೀಸ, ದಾಳಿ, ಬಂಧನ,

ಬೆಳ್ತಂಗಡಿ: ಅಕ್ರಮವಾಗಿ ಜಾನುವಾರು ಸಾಗಾಟ ಮತ್ತು ಕಸಾಯಿಖಾನೆಗೆ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಪುತ್ತಿಲ ಗ್ರಾಮದ ಪಲ್ಕೆ ಎಂಬಲ್ಲಿ ನಡೆದಿದೆ.

ಕರಾಯದ ಸಿರಾಜ್ ಎಂಬಾತ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ, ಹಾಗೂ ಪುತ್ತಿಲ ಗ್ರಾಮದ ಪಲ್ಕೆ ಎಂಬಲ್ಲಿ, ಅಶ್ರಪ್ ಎಂಬಾತ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜೂ. 1 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್‌ಐ ಉದಯರವಿ ವೈ ಎಂ ರವರು ಹಾಗೂ ಸಿಬ್ಬಂದಿಗಳು, ಆರೋಪಿ ಅಶ್ರಫ್ ಎಂಬಾತನ ಮನೆಯ ಬಳಿ ತೆರಳಿದಾಗ, ವಾಹನದಿಂದ ಜಾನುವಾರುಗಳನ್ನು ಇಳಿಸುತ್ತಿದ್ದ ಆರೋಪಿಯು ಪೊಲೀಸರನ್ನು ಕಂಡು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಸ್ಥಳದಲ್ಲಿದ್ದ ಎರಡು ಜಾನುವಾರುಗಳನ್ನು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ವಾಹವನ್ನು ಮತ್ತು ವಾಹನದಲ್ಲಿದ್ದ ಮೊಬೈಲ್‌ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಬಳಿಕ ಸ್ಥಳದ ಹತ್ತಿರದಲ್ಲಿಯೇ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿದ್ದ, ಸಿರಾಜ್ ಎಂಬಾತನ ಮನೆಯ ಬಳಿ ತೆರಳಿದಾಗ ಸ್ಥಳದಲ್ಲಿದ್ದ ಕರಾಯದ ಸಿರಾಜ್ ಹಾಗೂ ಇನ್ನೊಬ್ಬ ಆರೋಪಿ ಸ್ಥಳದಿಂದ ತಪ್ಪಿಸಿಕೊಂಡಿದ್ದು, ಆತನ ಮನೆಯ ಹಿಂಭಾಗದ ಶೆಡ್ ನಲ್ಲಿ, ಜಾನುವಾರಿನ ಮಾಂಸ ಹಾಗೂ ಮಾಂಸ ಮಾಡಲು ಉಪಯೋಗಿಸಿ ಕತ್ತಿ ಹಾಗೂ ಇತರೆ ಸೊತ್ತುಗಳು ಪತ್ತೆಯಾಗಿದೆ. ಸೊತ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳಾದ ಅಶ್ರಫ್, ಪಲ್ಕೆ ಮನೆ ಪುತ್ತಿಲ ಗ್ರಾಮ, ಮತ್ತು ಸಿರಾಜ್ ಕರಾಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!