Police: ಅಕ್ರಮ ಗಾಂಜಾ ಮಾರಾಟ, ಸೇವನೆ ಪ್ರಕರಣ ಪತ್ತೆ ಹಚ್ಚಿದ ಎಸ್ ಪಿ ವಿಶೇಷ ತಂಡ, ಇಬ್ಬರು ಆರೋಪಿತರ ಬಂಧನ

ದಾವಣಗೆರೆ: (Police) ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮವಾಗಿ ಮಾದಕ ದ್ರವ್ಯ ಮಾರಾಟ ಹಾಗೂ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ದಾವಣಗೆರೆ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯನ್ನು ರಚಿಸಿದ್ದು, ದಾವಣಗೆರೆ ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯದಲ್ಲಿ ವಿಶೇಷ ಕಾರ್ಯಚರಣೆ ನಡೆಸಲು ಸೂಚನೆ ನೀಡಿರುತ್ತಾರೆ.
ದಿನಾಂಕ: 07.08.2025 ರಂದು ಸಂಜೆ ಸಮಯದಲ್ಲಿ ದಾವಣಗೆರೆ ನಗರದ ಯರಗುಂಟೆ ಗ್ರಾಮದ ಸಮೀಪದ ಕೊಂಡಜ್ಜಿ ರಸ್ತೆಯ ಹತ್ತಿರದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಶ್ರೀ ಸಾಗರ್ ಅತ್ತರ್ ವಾಲ್ PSI, ಮಾದಕ ದ್ರವ್ಯ ನಿಗ್ರಹ ಪಡೆ ದಾವಣಗೆರೆ ಜಿಲ್ಲೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ, ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ರವರಾದ ಶ್ರೀ ಶರಣಬಸವೇಶ್ವರ ಬಿ ರವರ ಮಾರ್ಗದರ್ಶನದಲ್ಲಿ ಮತ್ತು ಪತ್ರಾಂಕಿತ ಅಧಿಕಾರಿಗಳು ಹಾಗೂ ಪಂಚರ ಉಪಸ್ಥಿತಿಯಲ್ಲಿ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪಿ ಎಸ್ ಐ ಶ್ರೀ ಸಾಗರ್ ಅತ್ತರ್ ವಾಲ್ & ಸಿಬ್ಬಂದಿಗಳು ಹಾಗೂ ದಾವಣಗೆರೆ ನಗರ ಠಾಣೆಯ ಪಿ.ಎಸ್.ಐ ಶ್ರೀ ರವಿ ನಾಯ್ಕ್, ಶ್ರೀಮತಿ ಲಲಿತಮ್ಮ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿದ್ದಾರೆ.
ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾರಾಟ ಮಾಡುತ್ತಿದ್ದ ಆರೋಪಿತರಾದ 1) ದಸ್ತಗಿರಿ, 35 ವರ್ಷ, ರಾಜೀವಗಾಂಧಿ ಬಡಾವಣೆ, ದಾವಣಗೆರೆ, 2) ಭರತ್ ಕುಮಾರ್ ಎಂ.ಎಸ್, 22 ವರ್ಷ, ಬಿ ಫಾರ್ಮ ವ್ಯಾಸಂಗ, ರಂಗನಾಥ ಬಡಾವಣೆ, ದಾವಣಗೆರೆ ರವರುಗಳನ್ನು ಬಂಧಿಸಿದ್ದು, ಆರೋಪಿತರಿಂದ ಮಾರಾಟ ಮಾಡಲು ತಮ್ಮ ಬಳಿ ಇದ್ದ ಬೈಕಿನಲ್ಲಿ ಇಟ್ಟುಕೊಂಡಿದ್ದ 1220 ಗ್ರಾಂ ಗಾಂಜಾ ಸೊಪ್ಪು 2) ಒಂದು ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು (ಅಂದಾಜು 2,00,000 ಲಕ್ಷ ಮೌಲ್ಯದ ಸ್ವತ್ತು) ವಶಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಕಾರ್ಯಚರಣೆಯಲ್ಲಿ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪಿ ಎಸ್ ಐ ಶ್ರೀ ಸಾಗರ್ ಅತ್ತರ್ ವಾಲ್ & ಸಿಬ್ಬಂದಿಗಳಾದ ಪ್ರಕಾಶ್, ಮಂಜುನಾಥ, ಷಣ್ಮಖ, ಶಿವರಾಜ, ಗೋವಿಂದರಾಜ್, ಗಾಂಧಿನಗರ ಠಾಣೆಯ ಪಿ.ಎಸ್.ಐ ಶ್ರೀ ರವಿನಾಯ್ಕ್ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್, ದಾವಣಗೆರೆ ಜಿಲ್ಲೆ ರವರು ಪ್ರಸಂಶಿಸಿರುತ್ತಾರೆ
ದಾವಣಗೆರೆ ನಗರದ ಎರೆಗುಂಟೆ ರಸ್ತೆಯಲ್ಲಿ ಅಶೋಕ ನಗರ ಬಳಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದವರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗಿದ್ದು, ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಮಾದಕ ದ್ರವ್ಯ ಸೇವನೆ ಮಾಡಿರುವುದು ಖಚಿತವಾಗಿರುತ್ತದೆ. ಈ ಸಂಬಂಧ ಇಬ್ಬರ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ