Police: ಕಳುವಾದ ಸ್ವತ್ತು ಪತ್ತೆ, ವಾರಸುದಾರರಿಗೆ ಹಸ್ತಾಂತರ; ಮಲೆಬೆನ್ನೂರು ಪೊಲೀಸ್ ಕಾರ್ಯಕ್ಕೆ ಗ್ರಾಮಸ್ಥರಿಂದ ಪ್ರಶಂಸೆ

ದಾವಣಗೆರೆ: (Police) ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದಲ್ಲಿಂದು ಸ್ಥಾಯಿ ಆದೇಶ ಸಂಖ್ಯೆ:1017 & 1032 ರಿತ್ಯಾ ಬೀಟ್ ಪದ್ಧತಿಗೆ ಸಂಬಂಧಿಸಿದಂತೆ ಬೀಟ್ ಕರ್ತವ್ಯಕ್ಕೆ ನೇಮಕಗೊಂಡ ಸಿಬ್ಬಂದಿಯವರ ಹಾಗೂ ಬೀಟ್ ಉಸ್ತುವಾರಿ ಅಧಿಕಾರಿಗಳ ಹೆಸರು, ಮೊಬೈಲ್ ನಂಬರ್ & ಭಾವಚಿತ್ರವುಳ್ಳ ಫಲಕಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್. ದಾವಣಗೆರೆ ಜಿಲ್ಲೆ ರವರು ಉದ್ಘಾಟನೆಯನ್ನು ಮಾಡಿದರು.
ನಂತರ ಸದರಿ ಗ್ರಾಮದಲ್ಲಿ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ *ಜನಸಂಪರ್ಕ ಸಭೆಯನ್ನು* ನಡೆಸಲಾಯಿತು. ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರುಗಳು ಅಪರಾಧಗಳನ್ನು ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು ಹಾಗೂ ಸಾರ್ವಜನಿಕರ ಕುಂಡುಕೊರತೆಗಳನ್ನು ಆಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಜನಸಂಪರ್ಕ ಸಭೆಯಲ್ಲಿ ಈ ಹಿಂದೆ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ *03 ರಾಬರಿ ಪ್ರಕರಣಗಳಲ್ಲಿ* ವಶಪಡಿಸಿಕೊಂಡ ಸ್ವತ್ತನ್ನು ವಾರಸುದಾರರಿಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್. ರವರು ಹಸ್ತಾಂತರಿಸಿದರು.
ಜನಸಂಪರ್ಕ ಸಭೆಯಲ್ಲಿ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ & ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್. ರವರು *ಬಹುಮಾನ ವಿತರಣೆ* ಮಾಡಿರುತ್ತಾರೆ. ಪೊಲೀಸರ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ಸದರಿ ಕಾರ್ಯಕ್ರಮದಲ್ಲಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಿ.ಎಸ್.ಬಸವರಾಜ್, ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಶ್ರೀ ಪ್ರಭು ಡಿ ಕೆಳಗಿನಮನಿ ಪಿ.ಎಸ್.ಐ(ಕಾ&ಸು) ಮತ್ತು ಶ್ರೀ ಚಿದಾನಂದಪ್ಪ.ಎಸ್.ಬಿ. ಪಿಎಸ್ಐ(ತನಿಖೆ) ಮಲೇಬೆನ್ನೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಸಾರ್ವಜನಿಕರು ಉಪಸ್ಥಿತರಿದ್ದರು.