Police Traffic management: ಸಂಚಾರ ನಿಯಮ ಉಲ್ಲಂಘನೆ ಕಡಿವಾಣಕ್ಕೆ ಪೊಲೀಸ್ ಇಲಾಖೆಯಿಂದ ನೂತನ ಆ್ಯಪ್ – ಎಸ್ ಪಿ ರಿಷ್ಯಂತ್

 

ದಾವಣಗೆರೆ: ಇನ್ನು ಮುಂದೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಸಾರ್ವಜನಿಕರು ಸ್ಥಳದಲ್ಲಿಯೇ ಫೋಟೊ ಕ್ಲಿಕ್ಕಿಸಿ, ಜಿಲ್ಲಾ ಪೊಲೀಸ್ ಇಲಾಖೆಗೆ ವರದಿ ನೀಡುವ ಹೊಸ ಆ್ಯಪ್‌ನ್ನು ಇಲಾಖೆ ಹೊರ ತಂದಿದೆ.

ಜಿಲ್ಲೆಯ ಕೇಂದ್ರ ಸ್ಥಾನ ಹಾಗೂ ತಾಲ್ಲೂಕು ಕೇಂದ್ರಗಳಾದ ಹರಿಹರ ನಗರ, ಹೊನ್ನಾಳಿ ಪಟ್ಟಣ, ಚನ್ನಗಿರಿ ಪಟ್ಟಣ ಮತ್ತು ಜಗಳೂರು ಪಟ್ಟಣಗಳಲ್ಲಿ ಸಾರ್ವಜನಿಕ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ದಾವಣಗೆರೆ ನಗರದಲ್ಲಿನ ನಗರ ಉಪ-ವಿಭಾಗ ಕಛೇರಿಯಲ್ಲಿ ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸೆಲ್‌ನ್ನು ತೆರೆಯಲಾಗಿದೆ.

ಟ್ರಾಫಿಕ್ ಮ್ಯಾನೆಜ್‌ಮೆಂಟ್ ವ್ಯವಸ್ಥೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಕಡಿಮೆ ಮಾಡುವ ಕಾರ್ಯದಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಕೂಡ ಪಾಲ್ಗೊಳ್ಳುವ ನೂತನ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ www.davangerepolice.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಚಯ ಕಲಂನಲ್ಲಿ ವಾಹನ ಸವಾರರ ತಪ್ಪುಗಳ ಬಗ್ಗೆ ಸಾರ್ವಜನಿಕರ ಕಣ್ಗಾವಲು ವ್ಯವಸ್ಥೆ ಎಂಬ ಶಿರ್ಷಿಕೆಯಡಿಯಲ್ಲಿರುವ ಲಿಂಕನ್ನು ಬಳಸಿ ಮೇಲ್ಕಂಡ ಸ್ಥಳಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸ್ಥಳದಲ್ಲಿಯೇ ಪೊಟೋ ತೆಗೆದು ಜೊತೆಗೆ ಲಿಂಕನಲ್ಲಿ ಕೇಳಲಾಗುವ ಮಾಹಿತಿಯನ್ನು ನೀಡುವ ಮೂಲಕ ನೂತನ ವ್ಯವಸ್ಥೆಯಲ್ಲಿ ಜಿಲ್ಲಾ ಪೊಲೀಸ್‌ಗೆ ವರದಿ ಮಾಡಬಹುದಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!