ಸಾರ್ವಜನಿಕರೆ ಎಚ್ಚರ, ಕೊವಿಡ್ ನಿಯಂತ್ರಣಕ್ಕೆ ಪೊಲೀಸರಿಂದ ಬಿಗಿ ಕ್ರಮ ಜಾರಿ: ಬೈಕ್ ಗಳನ್ನ ಸೀಜ್ ಮಾಡುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ

ಹೆಚ್ ಎಂ ಪಿ ಕುಮಾರ್
ದಾವಣಗೆರೆ : ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ.10 ರಿಂದ ಮೇ 24ರಿಂದ ಲಾಕ್‌ಡೌನ್ ಅನ್ನು ಘೋಷಿಣೆಗೂ ಮುನ್ನ ದಾವಣಗೆರೆ ಜಿಲ್ಲೆಯಲ್ಲಿ ಪೊಲೀಸರು ಶುಕ್ರವಾರ ಸಂಜೆಯಿಂದಲೇ ಕಾರ್ಯ ನಿರತರಾಗಿದ್ದಾರೆ.

ನಗರದ ಹದಡಿ ಬ್ರಿಡ್ಜ್, ಅರುಣ ಸರ್ಕಲ್, ಜಯದೇವ ವೃತ್ತ , ಐಟಿಐ, ಗುಂಡಿ ಸರ್ಕಲ್ ಸೇರಿದಂತೆ ಆಯಾ ವ್ಯಾಪ್ತಿಯಲ್ಲಿ ಪೊಲೀಸರು ಅನಾವಶ್ಯಕ ಓಡಾಡುವ ವಾಹನಗಳನ್ನ ಬೈಕ್ ನಲ್ಲಿ ಇಬ್ಬರು ಹೋಗುವವರನ್ನು ಹಿಡಿದು ಗಾಡಿ ಸೀಜ್ ಮಾಡುತ್ತಿದ್ದಾರೆ. ಈ ನಡುವೆ ಸಂಜೆ ಕೂಲಿ ಮುಗಿಸಿಕೊಂಡು ಮನೆಗೆ ಹೋಗುವವರು, ಕೆಲಸಕ್ಕೆ ಹೋಗುವವರು, ವೈದ್ಯರ ಬೈಕ್ ಗಳನ್ನ ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದಿವೆ.

ಒಂದಿಷ್ಟು ಜನ ಕಷ್ಟ ಅನುಭವಿಸಿದರು:
ಬೈಕ್‌ನಲ್ಲಿ ಹೋಗುವುದಕ್ಕೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸಾಮಾಜಿ ಅಂತರ ಇಲ್ಲದ ಕಾರಣ ಇಬ್ಬರು ಹೋಗುವುದಕ್ಕೆ ಅವಕಾಶವಿಲ್ಲ, ಆದ್ದರಿಂದ ಇವರ ಗಾಡಿಯನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸುತ್ತಾರೆ. ಇನ್ನು ಯಾವುದೇ ಕಾರಣ ನೀಡದೆ ಬೈಕ್ ಕೀ ತೆಗೆದುಕೊಂಡು ಬೆಳಗ್ಗೆ ಬಂದು ನಿಮ್ಮ ಬೈಕ್ ತೆಗೆದುಕೊಂಡು ಹೋಗಿ ಎಂದಿದ್ದಾರೆ.ಹಿರಿಯ ಅಧಿಕಾರಿಗಳು ಹೇಳಿರುವುದು ಒಂದು ರೀತಿ ಕೆಳ ಹಂತದ ಸಂಬಂಧಿಸಿದವರು ನಡೆದುಕೊಂಡಿರುವುದು ಇನ್ನೊಂದು ರೀತಿಯಾಗಿದೆ.ಕೆಲವರು ತಮ್ಮಲ್ಲೇ ಗೊಣಗುಡುತ್ತಾ ಪೇಚು ಮೊರೆ ಹಾಕಿಕೊಂಡು ಹೋಗಿದ್ದು ಕಂಡುಬಂತು.
ಡಿ ಎ ಆರ್ ಗ್ರೌಂಡ್ ನಲ್ಲಿ ಬೈಕ್‌ಗಳು :
ನಗರದಲ್ಲಿ ಸೀಜ್ ಮಾಡಿದ ಗಾಡಿಗಳು ಡಿ ಎ ಆರ್ ಗ್ರೌಂಡ್‌ನಲ್ಲಿ ಹಾಕಲಾಗುತ್ತಿದ್ದು, ವಾಹನ ಸವಾರರು ಬೈಕ್‌ನ್ನು ತೆಗೆದುಕೊಂಡು ಬರಲು ಡಿ ಎ ಆರ್ ಗ್ರೌಂಡ್‌ಗೆ ಕಾಲ್ ನಡಿಗೆಯಲ್ಲಿ ಹೋಗುವುದು ಸಾಮಾನ್ಯವಾಗಿತ್ತು, ಈ ನಡುವೆ ಕೆಲವರಂತೂ ಮೇಲಿನರ ಆದೇಶ ನಾವೇನೂ ಮಾಡೋಕೆ ಆಗಲ್ಲ ಅವರನ್ನೇ ಕೇಳಿ ಕೊಳ್ಳಿ ಎಂದು ಸಾರ್ವಜನಿಕರಿಗೆ ಹೇಳಿದ್ದಾರೆ.