‘ಪ್ರೇಮ ಲೋಕದಲ್ಲಿ ಮಿಂದೆದ್ದ ಪೊಲೀಸರು’.! ಬೆಳಗ್ಗೆ ಆಟ – ರಾತ್ರಿ ಮನರಂಜನೆ.!

ದಾವಣಗೆರೆ : ಕ್ರೇಜಿಸ್ಟಾರ್ ರವಿಚಂದ್ರನ್ ಏನೇ ಮಾಡಿದರು ಡಿಫ್ರೆಂಟ್ ಅದು ಅವರ ಮೊದಲ ಚಿತ್ರದಿಂದಲೂ ಸಾಬೀತಾಗಿದೆ. ಇಂದಿಗೂ ರವಿಚಂದ್ರನ್ ನಿರ್ದೇಶನ ಮಾಡ್ತಿದ್ದಾರೆ ಅಂದರೆ ಸಾಕು ಅಲ್ಲಿ ಎಲ್ಲಿಲ್ಲದ ಕ್ರೇಜ್ ಹುಟ್ಟಿಕೊಳ್ಳುತ್ತದೆ. ರವಿಚಂದ್ರನ್ ಎನ್ನುವ ಹೆಸರಿಗೇನೆ ಒಂದು ತೂಕ ಇದೆ. ಅಂತಹದ್ದೇ ನಟನೆಯನ್ನು ಪೊಲೀಸರು ಮಾಡಿದ್ರೆ ಹೇಗಿರುತ್ತದೆ ಎನ್ನುತ್ತೀರಾ ಹಾಗಾದರೆ ಈ ವಿಡಿಯೋ ನೋಡಿ..
ಸದಾ….ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಒಂದೆರಡು ದಿನಗಳ ಕಾಲ…ಕ್ರೈಂ, ಮೇಲಧಿಕಾರಿಗಳ ಸೂಚನೆ, ಬಿಗಿ ಬಂದೋ ಬಸ್ತ್ ಎಲ್ಲವನ್ನು ಮರೆತು ರಿಲ್ಯಾಕ್ಸ್ ಮೂಡಿಗೆ ಹೋಗಿದ್ದರು…ಅದಕ್ಕಾಗಿ ಪೊಲೀಸ್ ಕವಾಯತು ಮೈದಾನದಲ್ಲಿ ಮನರಂಜನೆಯೊಂದನ್ನು ಏರ್ಪಡಿಸಿದ್ದು, ರಾತ್ರಿ ವೇಳೆ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ವೇದಿಕೆ ಸಜ್ಜಾಗಿತ್ತು…ಬೆಳಗ್ಗೆ ಆಟ, ರಾತ್ರಿ ಮನರಂಜನೆಯಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲೂ ಕಲೆ ಇದೆ ಎಂದು ಖಾಕಿ ಪಡೆ ಪ್ರದರ್ಶನದ ಮೂಲಕ ತೋರಿಸಿದ್ರೂ…
ಹಳೆ ಹಾಡುಗಳು ಅಂದ್ರೆ ಹಾಗೇನೇ…ಥ್ರಿಲ್ ಹೆಚ್ಚು..ಅವುಗಳು ಇಂದಿಗೂ ಕಿವಿಯನ್ನು ತಂಪು ಮಾಡುತ್ತದೆ..ಅದರಲ್ಲೂ ರವಿಚಂದ್ರನ್ ನಟಿಸಿರುವ ಸಿನಿಮಾ ಅಂದ್ರೆ ಕೇಳಬೇಕಾ..ಮೈಯಲ್ಲಿ ರೋಮಾಂಚಾನ ಗೊಳಿಸುತ್ತಿತ್ತು…ಅದರಲ್ಲೂ ಪ್ರೇಮ ಗೀತೆ ಅಂದ್ರೆ ಕೇಳಬೇಕಾ…ಅದಕ್ಕೆ ರವಿಚಂದ್ರನ್ ಬಿಟ್ಟರೇ ಬೇರ್ಯಾರು ಸಾಟಿ ಇಲ್ಲ.
ಅಂತೆಯೇ ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರದ ಪ್ರೇಮಲೋಕದ ಹಾಡಿಗೆ ಡಿಎಸ್ಪಿ ಬಸವರಾಜ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಅದ್ದೂರಿಯಾಗಿ ನಟನೆ ಮಾಡಿದರು..ಕೆಲ ಕಾಲ ಹಳೆ ಪ್ರೀತಿಯನ್ನು ನಟನೆ ಮೂಲಕ ನಿವೇದನೆ ಮಾಡಿಕೊಂಡರು. ಅವರ ಈ ನಟನೆ ಅವರವರ ಹಳೆಯ ಪ್ರೇಮಲೋಕಕ್ಕೆ ಕರೆದು ಕೊಂಡು ಹೋಗಿತ್ತು. ಹಲವರು ತಮ್ಮ ಅಧಿಕಾರಿಗಳಲ್ಲಿ ಇಂತಹ ಕಲಾದೇವತೆ ಇದ್ದಾಳೆ ಎಂದು ಕೆಳಗಿನ ಸಿಬ್ಬಂದಿಗಳು ಮಾತನಾಡುತ್ತಿರುವುದು ಕಂಡು ಬಂದಿತು.
ಹಳೆ ಹಾಡು ಅಂದ್ರೆ ಹಾಗೇನೆ, ಇಪ್ಪತ್ತರ ದಶಕದ ಹಾಡುಗಳು ಈಗಲೂ ತನ್ನ ಪ್ರಾಮುಖ್ಯತೆ ಕಳೆದುಕೊಂಡಿಲ್ಲ…ಅದಕ್ಕಾಗಿ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡ ಪ್ರೇಮ ಲೋಕದ ಹಾಡನ್ನು ಆಯ್ಕೆ ಮಾಡಿಕೊಂಡಿತು..
ವಿಷ್ಣುವರ್ಧನ್ ಪಾತ್ರದಲ್ಲಿ ಕ್ರೈಂ ಡಿವೈಎಸ್ಪಿ ಬಸವರಾಜ್ ನಟನೆ ಮಾಡಿದರೆ, ಹಿರೋಯಿನ್ ಶಶಿ ಪಾತ್ರದಲ್ಲಿ ವೈರ್ ಲೇಸ್ ಸಿಪಿಐ ತೇಜೋವತಿ, ರವಿಚಂದ್ರನ್ ಪಾತ್ರದಲ್ಲಿ ಹದಡಿ ಪಿಎಸ್ಐ ಸಂಜೀವ್ ಮತ್ತಿತರ ಸಿಬ್ಬಂದಿಗಳು ಸ್ಟೂಡೆಂಟ್ಸ್ ಆಗಿದ್ದರು. ಪ್ರೇಮ ಲೋಕದ ಚಿತ್ರದಲ್ಲಿ ನಟಿಸಿರುವಂತೆ ಪೊಲೀಸ್ ಸಿಬ್ಬಂದಿಗಳು ನಟಿಸಿದರು…ನಟನೆಗೆ ತಕ್ಕಂತೆ ಪೋಕೋಸ್ ಲೈಟ್ ಗಳು ಆಫ್, ಆ್ಯಂಡ್ ಆನ್ ಆದವು..ಇವರ ನಟನೆಯನ್ನು ನೋಡಿದವರೂ ನಾವು ಕೂಡ ಭಾಗವಹಿಸಬೇಕಿತ್ತು ಎಂದು ಮನಸ್ಸಿನಲ್ಲಿಯೇ ಅಂದುಕೊಂಡರು.
1987ರಲ್ಲೇ ಸಿನಿಮಾಗಾಗಿ ರವಿಚಂದ್ರನ್ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದನ್ನು ಪ್ರೇಮ ಲೋಕದ ಸಿನಿಮಾದಲ್ಲಿ ಹಲವರು ನೋಡಿದ್ದರು. ಆದರೆ ಅದೇ ರೀತಿಯ ಚಿತ್ರಣ ನೋಡುಗರ ಗಮನ ಸೆಳೆಯಿತು
‘ಪ್ರೇಮ ಲೋಕ’ ಚಿತ್ರದ ‘ ಬಂದ್ಲೂ ಸರ್, ಹೋ…ಬಂದ್ಲೂ ಸರ್ ಹೋ…ನೀನೇ ನಾ ಶಂಕುತಲಾ…ಅಲ್ಲ ನಾನು ಶಶಿಕಲಾ…ಯಾರನ್ನೂ ನೋಡಬೇಕಿತ್ತು..ಆ್ಯಡ್ಮಿಷನ್ ಆಗ್ಬೇಕಿತ್ತು..ನಿನಗೆ ಯಾವ ಬೆಂಚು ಬೇಕೋ ಆ ಬೆಂಚೇ ಸೆಲೆಕ್ಟ್ ಮಾಡಿಕೋ..ಈ ಬೆಂಚೆ ಸೆಲೆಕ್ಟ್ ಮಾಡಿಕೋ..ಶಟ್ ಅಫ್ ಅಂದ್ರೆ ಬಾಯಿ ಮುಚ್ಚಬೇಕೂ..ಲಕ್ಷ್ಮೀ ನೀನು ಇಲ್ಲಿ ಕೂತುಕೋ..ಶಶಿ ಇಲ್ಲಿ ನೀ ಕುಳಿತುಕೋ ಎನ್ನುವ ಸಾಲು ಮುಗಿಯುತ್ತಿದ್ದಂತೆ ಕ್ಲೈಮ್ಯಾಕ್ಸ್ ಸೀನ್ ನೋಡುಗರ ಮಂತ್ರ ಮುಗ್ದರನ್ನಾಗಿ ಮಾಡಿತ್ತು. ನೆರೆದಿದ್ದವರು ಒನ್ಸ್ ಮೋರೋ..ಒನ್ಸ್ ಮೋರೋ ಎನ್ನುತ್ತಿದ್ದರು…ಒಟ್ಟಾರೆ ಖಾಕಿ ಪಡೆ ರವಿಚಂದ್ರನ್ ಹಾಡಿಗೆ ಸಖತ್ ಸ್ಟೇಪ್ಸ್ ಹಾಕಿ ಸಖತ್ ಎಂಜಾಯ್ ಮಾಡಿದೊಂತು ಸುಳ್ಳಲ್ಲ..