ಹೊನ್ನಾಳಿ: ಪೂಜಾರಿ ಕುಮಾರ್ ಕೊಲೆ ಸಂಬ0ಧ ಐವರ ಬಂಧನ!

ದಾವಣಗೆರೆ: ಇತ್ತೀಚಿಗೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಕೊಲೆಯಾಗಿದ್ದ ಪೂಜಾರಿ ಕುಮಾರ್ ಸಾವಿನ ಜಾಡು ಹಿಡಿದ ಪೊಲೀಸರು ಕೊನೆಗೂ ಅವರ ಕೊಲೆಗೆ ಕಾರಣ ಯಾರು ಎಂಬುದನ್ನು ಕಂಡುಹಿಡಿದಿದ್ದು ಹಂತಕರನ್ನು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಬೆನ್ನು ಬಿದ್ದಿದ್ದ ಕುಮಾರ್ನನ್ನು ಮೂರು ಜನ ಬಾಡಿಗೆ ಹಂತಕರು ಮತ್ತು ಅದಕ್ಕೆ ಪುಷ್ಠಿ ನೀಡಿದ ಇನ್ನಿಬ್ಬರನ್ನು ಕೊಲೆಗೈದ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಕುಮಾರ ಸ್ವಾಮಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಇವನ ಜೊತೆಗೆ ಮೋಹನ್ ಹಾಗೂ ದಿನೇಶ್ ಎಂಬುವರು ಸಹ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಹೀಗಿದ್ದಾಗ ಮೋಹನ್ ಹಾಗೂ ದಿನೇಶ್ ಕುಮಾರಸ್ವಾಮಿಯಿಂದ 20 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದರು. ಸಾಲ ಹಿಂತಿರುಗಿಸುವ0ತೆ ಕುಮಾರ ಕೇಳಿದ್ದಕ್ಕೆ ಹೊಂಚು ಹಾಕಿ ಕೊಲೆ ಮಾಡಿದ್ದಾರೆ. ಇವರಷ್ಟೇ ಅಲ್ಲದೆ ಮೂರು ಜನ ಬಾಡಿಗೆ ಹಂತಕರ ಸಹಾಯದಿಂದ ಪೂಜಾರಿ ಕುಮಾರನನ್ನು ಹತ್ಯೆ ಮಾಡಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬ0ಧಿಸಿದ0ತೆ ಕುಮಾರಸ್ವಾಮಿ ಜೊತೆ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದ ಹೊನ್ನಾಳಿ ನಿವಾಸಿ ಮೋಹನ್ (28), ಹಾಸನದ ದಿನೇಶ್ (38), ಬಾಡಿಗೆ ಹಂತಕರಾದ ಹೊನ್ನಾಳಿ ತಾಲೂಕಿನ ಹಿಂಡಸಘಟ್ಟ ಗ್ರಾಮದ ಕಾರ್ತೀಕ್ (29), ಪ್ರಣೇಶ್ (32) ಹಾಗೂ ಸುನೀಲ್ನಾಯ್ಕ (25) ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್.ಪಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
garudavoice21@gmail.com 9740365719

 
                         
                       
                       
                       
                       
                       
                       
                      