ಹಿರಿಯೂರು ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ , ಇಲ್ಲದಿದ್ದರೆ ಸರ್ಕಾರ ಅಸ್ತಿತ್ವ ಕಳೆದು ಕೊಳ್ಳುತ್ತೆ ಯಾದವಾನಂದ ಶ್ರೀ ಎಚ್ಚರಿಕೆ

ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡದ್ದಕ್ಕೆ ಯಾದವ ಮಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರೆ . ಬೊಮ್ಮಾಯಿ ಸಂಪುಟದಲ್ಲಿ ಯಾದವರಿಗೆ ಸಚಿವ ಸ್ಥಾನ ನೀಡಿಲ್ಲ.

ಸಮುದಾಯದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಈ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಎಚ್ಚರಿಕೆಯನ್ನ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ರಾಜ್ಯದಲ್ಲಿ 40 ಲಕ್ಷ ಯಾದವ ಸಮುದಾಯವಿದೆ.

ರಾಜ್ಯದ 27 ತಾಲೂಕುಗಳಲ್ಲಿ ಯಾದವ ಸಮುದಾಯವೇ ನಿರ್ಣಾಯಕ. ಚುನಾವಣೆ ಪೂರ್ವದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸ್ಥಾನದ ಭರವಸೆ ನೀಡಿದ್ದರು. ಅವರ ಅವಧಿಯಲ್ಲಿಯೂ ಈ ಭರವಸೆ ಈಡೇರಲಿಲ್ಲ. ಪ್ರಸ್ತುತ ಸಂಪುಟದಲ್ಲಿ ಕೊನೆಯವರೆಗೂ ಪೂರ್ಣಿಮಾ ಅವರ ಹೆಸರಿತ್ತು. ಆದರೆ, ಘೋಷಣೆ ಸಮಯದಲ್ಲಿ ಅವರ ಹೆಸರು ಕೈ ಬಿಟ್ಟಿದ್ದಾರೆ.

ಇದರಿಂದ ಯಾದವ ಸಮುದಾಯ ಬೇಸರವಾಗಿದೆ . ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲೂ ಸ್ಥಾನ ದೊರೆತಿಲ್ಲ. . ಬೇರೆ ಬೇರೆ ವರ್ಗದವರಿಗೆ ಸಂಪುಟದಲ್ಲಿ ಅವಕಾಶ ದೊರೆತಿದೆ. ಯಾದವ ಸಮುದಾಯಕ್ಕೆ ಮಾತ್ರ ಮಾನ್ಯತೆ ದೊರೆಯುತ್ತಿಲ್ಲ ಯಾಕೆ ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಇನ್ನೂ ಸಮಯವಿದ್ದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡಬೇಕು. ತಪ್ಪಿದರೆ, ಸಮುದಾಯ ಬಿಜೆಪಿಯನ್ನು ಕೈಬಿಡಲಿದೆ ಎಂದು ಯಾದವಾನಂದ ಸ್ವಾಮೀಜಿ ಬಿಜೆಪಿ ಸರ್ಕಾರಕ್ಕೆಎಚ್ಚರಿಕೆ ನೀಡಿದರು .

Leave a Reply

Your email address will not be published. Required fields are marked *

error: Content is protected !!