ಶ್ರೀ ದುರ್ಗಾಂಬಿಕ ದೇವಿಗೆ ಉರುಳು ಸೇವೆ ಸಲ್ಲಿಸಿ, ವಿಶೇಷ ಪೂಜೆ ಸಲ್ಲಿಸಿದ ಜಗಳೂರಿನ ಜನಪ್ರಿಯ ಶಾಸಕರು..
ದಾವಣಗೆರೆ : ದೇವನಗರಿಯ ಪ್ರಖ್ಯಾತ ಐತಿಹಾಸಿಕ ಶ್ರೀ ದುರ್ಗಾಂಬಿಕ ದೇವಿಯ ಜಾತ್ರೆಯ ಪ್ರಯುಕ್ತ ಜಗಳೂರಿನ ಜನಪ್ರಿಯ ಶಾಸಕರು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಅಧ್ಯಕ್ಷರಾದ ಎಸ್.ವಿ. ರಾಮಚಂದ್ರಪ್ಪ ಹಾಗೂ ಅವರ ಪುತ್ರ ಅಜೆಯೇಂದ್ರ ಸಿಂಹ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉರುಳು ಸೇವೆ ಮಾಡಿದರು. ಈ ವೇಳೆ ಪತ್ನಿ ಶ್ರೀಮತಿ ಇಂದಿರಾ ರಾಮಚಂದ್ರಪ್ಪರವರು ಸೇರಿದಂತೆ ಕುಟುಂಬದೊAದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸೊಕ್ಕೆ ನಾಗರಾಜ್, ಬಿದರಕೆರೆ ರವಿಕುಮಾರ್, ಮಾಗಡಿ ಮಂಜಣ್ಣ, ಫಣಿಯಾಪುರ ಲಿಂಗರಾಜ, ಕಸ್ತೂರಿಪುರ ಶಿವಣ್ಣ, ವೆಂಕಟೇಶಪುರ ಸತೀಶನಾಯ್ಕ್ , ಸೊಕ್ಕೆ ಪಾಪನಾಯಕ, ಮಲ್ಲೇಶ್, ಮರಿಕುಂಟೆ ನೀಲಪ್ಪ, ಕಸವನಹಳ್ಳಿ ಅಂಜಿನಪ್ಪ, ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.