‘ಮಡಿಕೇರಿ ಚಲೋ ‘ ಮುಂದೂಡಿಕೆ.! ನನ್ನನ್ನ ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ – ಸಿದ್ದರಾಮಯ್ಯ
ಬೆಂಗಳೂರು : ಆಗಸ್ಟ್ 26ರಂದು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಅಭಿಯಾನವನ್ನು ಈಗ ರದ್ದುಪಡಿಸಲಾಗಿದೆ. ಸದ್ಯ ಮಡಿಕೇರಿ ಚಲೋ ಮುಂದೂಡಲಾಗಿದ್ದು ಎಲ್ಲರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಇಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿಯನ್ನು ಆಯೋಜನೆ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು, ನಾನೊಬ್ಬ ಮಾಜಿ ಮುಖ್ಯಮಂತ್ರಿ ಆಗಿದ್ದು ಕಾನೂನು ಪಾಲನೆ ಮಾಡಬೇಕಾಗಿರುವುದು ನನ್ನ ಕರ್ತವ್ಯ. ಹಾಗಾಗಿ ಮಡಿಕೇರಿ ಚಲೋ ವನ್ನು ಮುಂದೂಡಲಾಗಿದೆ ಎಂದರು.
ರಾಜ್ಯ ಸರ್ಕಾರಕ್ಕೆ ನನ್ನ ಮೇಲೆ ಭಯ ಬಂದಿದೆ ಹಾಗಾಗಿ ಇಲ್ಲಸಲ್ಲದ ಕಾರಣ ಹೇಳಿ ಸಾವರ್ಕರ್ ವಿಚಾರ ಮುಂದಿಟ್ಟುಕೊAಡು ನನ್ನನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಹಿಂದೆ ಸಾಕಷ್ಟು ಬಾರಿ ನಾನು ಕೊಡುಗೆ ಭೇಟಿ ನೀಡಿದ್ದೆ, ಆ ವೇಳೆಲಿ ಯಾವುದೇ ತರಹದ ಘಟನೆಗಳು ನಡೆದಿರಲಿಲ್ಲ. ಇದೀಗ ನನ್ನನ್ನ ಹತ್ತಿಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅಲ್ಲದೆ ಕೆ.ಜಿ. ಬೋಪಯ್ಯ ಅವರು ಕೊಡಕೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.
ನಮ್ಮ ಪ್ರತಿಭಟನೆ ಹತ್ತಿಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅನಗತ್ಯವಾಗಿ ನನ್ನ ವಿರುದ್ಧ ಇಲ್ಲದ ಕಾರಣ ಹೇಳಿ ಪ್ರತಿಭಟನೆ ಮಾಡಿಸುತ್ತಿದೆ. ಇದೀಗ ಮಡಿಕೇರಿಯಲ್ಲಿ ನಿಷೇಧಜ್ಞೆಯನ್ನು ಜಾರಿ ಮಾಡಿಸಿದೆ. ಆದ್ರೆ ನಾವು ನಿಷೇಧಾಗ್ನೇ ಜಾರಿಯನ್ನು ಉಲ್ಲಂಘನೆ ಮಾಡಬಹುದಿತ್ತು. ಆದರೆ ನಾನು ಒಬ್ಬ ಮಾಜಿ ಸಿಎಂ ಆಗಿರುವುದರಿಂದ ಆ ರೀತಿಯ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಕಾನೂನನ್ನ ಗೌರವಿಸಿ ಮಡಿಕೇರಿ ಚಲೋ ಕಾರ್ಯಕ್ರಮವನ್ನು ಮುಂದೋಡಿದ್ದೇವೆ. ಶೀಘ್ರವೇ ಮುಂದಿನ ದಿನಗಳಲ್ಲಿ ಮಡಿಕೇರಿ ಚೆಲೋ ದಿನಾಂಕವನ್ನು ಪಕ್ಷದ ಮುಖಂಡರ ಜೊತೆ ಮಾತನಾಡಿ ತಿಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿಎಂ ಹೋದಾಗ ಅಲ್ಲಿನ ಶಾಸಕರ ಕಳಪೆ ಕೆಲಸ ಗೊತ್ತಾಗುತ್ತದೆ ಎಂದು ಅವೈಡ್ ಮಾಡಿದ್ದಾರೆ. ಅಲ್ಲಿ ಪ್ರತಿಭಟನೆ ವೇಳೆ ಒಬ್ಬರು ಕೋಳಿ ಮೊಟ್ಟೆ ಎಸೆದರು. ಅದನ್ನು ನೋಡಿ ಪೊಲೀಸರು ಸಹ ಸುಮ್ಮನಿದ್ರು. ಬಜರಂಗದಳದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ನಮ್ಮ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆಸಿದರು ಪೊಲೀಸರು. ವೆಂಟೆಡ್ ಡ್ಯಾಂ ನಿಂದ ಜನರು ತೊಂದರೆ ಆಗುತ್ತಿದೆ ಎಂದು ಹೇಳಿದರು. ಅಲ್ಲಿ 2018-19ರಲ್ಲಿ ಮಳೆಯಿಂದ ಹಾನಿಯಾಗಿತ್ತು. ಆದರೆ ಇದುವರೆಗೂ ಯಾವುದೇ ಮನೆಗಳನ್ನು ಸಂತ್ರಸ್ತರಿಗೆ ಕಟ್ಟಿಸಿ ಕೊಟ್ಟಿಲ್ಲ. ಆದರೆ ನಾವು 750 ಮನೆಗಳನ್ನು ಕಟ್ಟಿಸಿಕೊಟ್ಟೆವು. ಆದರೆ ಬಿಜೆಪಿ ಸರ್ಕಾರ 10000ಗಳ ಚೆಕ್ ನೀಡಿ ಸುಮ್ಮನಾಗಿದೆ ಅದು ಕೂಡ ಸಂತ್ರಸ್ತರ ಕೈ ತಲುಪಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.