ಜೂನ್ 4 ರಂದು ದಾವಣಗೆರೆ ನಗರ ವಿವಿದೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ : ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ 66/11ಕೆವಿ ದಾವಣಗೆರೆ/ಅವರಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್14-ಮಹಾವೀರ ಮತ್ತು ಎಫ್04-ಬಿ.ಟಿ ಮಾರ್ಗದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಜಗಳೂರು ಬಸ್ ನಿಲ್ದಾಣಕ್ಕೆ ಪುನರಾಭಿವೃದ್ದಿ ಕಾಮಗಾರಿ ಹಾಗೂ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಾಲ್ಮೀಕಿ ಸಮುದಾಯ ಭವನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಜೂ.04 ರ ಶನಿವಾರ ದಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಫ್14-ಮಹಾವೀರ ಫೀಡರ್: ಟಿ.ಸಿ ಲೇಔಟ್, ಎಲ್‍ಐಸಿ ಆಫೀಸ್, ಕೆಆರ್ ರಸ್ತೆ, ಜಗಳೂರು ಬಸ್‍ಸ್ಟಾಪ್, ಅರಳೀಮರ ಸರ್ಕಲ್, ನೂರಾನಿ ಆಟೋಸ್ಟ್ಯಾಂಡ್, ವೆಂಕಟೇಶ್ವರ ದೇವಸ್ಥಾನದ ಪಕ್ಕ, ಆನೆಕೊಂಡ ಹೊಸ ಲೇಔಟ್, ಉರ್ದು ಸ್ಕೂಲ್ ಹಿಂಭಾಗ, ಅಜಾದ್‍ನಗರ 10 ರಿಂದ 16ನೇ ಕ್ರಾಸ್‍ವರೆಗೆ, ಅಕ್ಸ ಮಸೀದಿ ಹಿಂಭಾಗ, ಬೀಡಿ ಲೇಔಟ್, ಅಜಾದ್ ನಗರ ಪೊಲೀಸ್ ಸ್ಟೇಷನ್, ಹೆಗಡೆ ನಗರ, ರಜಾವುಲ್ಲಾ ಮುಸ್ತಾಫ ನಗರ ಸ್ವಲ್ಪಭಾಗ, ಅಮ್ಮಜಾನ್, ಬಾಬಾಜಾನ್, ಜೋಗಲ್‍ಬಾಬಾ ಲೇಔಟ್, ಮಾಗನಹಳ್ಳಿ ರಸ್ತೆ ಹಳ್ಳದವರೆಗೆ, ಕೆಆರ್ ರಸ್ತೆ, ಜಗಳೂರು ಬಸ್‍ಸ್ಟ್ಯಾಂಡ್, ಜಗಳೂರು ರಸ್ತೆ ಎಆರ್‍ಬಿ ಮಿಲ್, ಚಾಮರಾಜಪೇಟೆ, ವಾಟರ್ ಟ್ಯಾಂಕ್, ಎಸ್‍ಎಸ್ ಆಸ್ಪತ್ರೆ, ಅರಳೀಮರದ ಸರ್ಕಲ್, ಬೇತೂರ್ ರಸ್ತೆ, ಚರ್ಚ್ ರಸ್ತೆ, ಮುನ್ಸಿಪಲ್ ಕಾಲೇಜ್, ಕೊಹಿನೂರ್ ಹೋಟೆಲ್ ಹಿಂಭಾಗ, ಮಾಗನಹಳ್ಳಿ ರಸ್ತೆ, ಹಾಸಬಾವಿ ಸರ್ಕಲ್, ಮಿಲ್ಲತ್ ಸ್ಕೂಲ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್04-ಬಿ.ಟಿ ಫೀಡರ್: ರೆಹಮಾನ್ ರಸ್ತೆ, ಮಂಡಕ್ಕಿ ಭಟ್ಟಿ 1ನೇ ಕ್ರಾಸ್‍ನಿಂದ 10ನೇ ಕ್ರಾಸ್‍ವರೆಗೆ, ರಿಂಗ್ ರಸ್ತೆ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲಮಾರ್ಕ್ಸ್ ನಗರ, ದೇವರಾಜ್ ಕ್ವಾರ್ಟಸ್(ಬೇತೂರ್ ರಸ್ತೆ) ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.