ದಾವಣಗೆರೆ: ಮೇ 2 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ; ದಾವಣಗೆರೆ ನಗರದ ಮಹಾನಗರ ಪಾಲಿಕೆ ವತಿಯಿಂದ ಅಕ್ಟೋಗನ್ ಅಳವಡಿಸಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯನ್ನು ಮೇ 2 ರಂದು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಸವೇಶ್ವರ ಫೀಡರ್ ವ್ಯಾಪ್ತಿಯ ಎಸ್.ಎಸ್. ಬಡಾವಣೆ ಎ & ಬಿ ಬ್ಲಾಕ್, ಶಾಂತಿ ನಗರ, ಬಸವೇಶ್ವರ ಬಡಾವಣೆ, ಬಾಪೂಜಿ ನಗರ, ಮಹಾಲಕ್ಷ್ಮೀ ಬಡಾವಣೆ ಹಾಗೂ ಸುತ್ತಮುತ್ತ ಪ್ರದೇಶಗಳು.
ಎಂ.ಸಿ.ಸಿ.ಬಿ ಎಫ್2 ಫೀಡರ್ ವ್ಯಾಪ್ತಿಯ ಎಸ್.ಎಸ್ ಲೇಔಟ್ ಎ. ಬ್ಲಾಕ್, ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ, ಎಂ.ಸಿ.ಸಿ ಬಿ.ಬ್ಲಾಕ್, ಬಿ.ಐ.ಇ.ಟಿ ರಸ್ತೆ, ಗ್ಲಾಸ್‍ಹೌಸ್‍ಏರಿಯಾ, ಲಕ್ಷ್ಮೀ ಪ್ಲೋರ್ ಮಿಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ನಿಜಲಿಂಗಪ್ಪ ಫೀಡರ್ ವ್ಯಾಪ್ತಿಯ ನಿಜಲಿಂಗಪ್ಪ ಬಡಾವಣೆ, ಯಲ್ಲಮ್ಮ ನಗರ, ವಿನೋಬನಗರ 4 ನೇ ಮೇನ್, 3ನೇ ಮೇನ್, ದೇವರಾಜ್‍ಅರಸ್ ಲೇಔಟ್ ಎ. ಬ್ಲಾಕ್, ವಿನಾಯಕ ನಗರ, ಸಂಗೊಳ್ಳಿ ರಾಯಣ್ಣ ನಗರ ಹಾಗೂ ಸುತ್ತ ಮುತ್ತಲ ಪ್ರದೇಶಗಳು.
ಎಫ್-21 ಸಾಯಿ ಫೀಡರ್ ವ್ಯಾಪ್ತಿಯ ಶಾಮನೂರು ರಸ್ತೆ, ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ಮತ್ತು ಸುತ್ತ ಮುತ್ತಲ ಪ್ರದೇಶಗಳು. ಎಫ್-15 ಸ್ವಿಮ್ಮಿಂಗ್ ಫೂಲ್ ಫೀಡರ್ ವ್ಯಾಪ್ತಿಯ ಸಿ.ಜಿ. ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಡೆಂಟಲ್ ಕಾಲೇಜ್ ರೋಡ್. ಬಾಪೂಜಿ ಆಸ್ಪತ್ರೆ ರಸ್ತೆ, ಬಾಪೂಜಿ ಬ್ಯಾಂಕ್ ಹದಡಿ ರೋಡ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.