ಪವರ್ ಪಾಲಿಟಿಕ್ಸ್- ಧಾರವಾಡ ಜಿಲ್ಲೆಯಲ್ಲಿ ಶುರುವಾಗಿದೆ

ಪವರ್ ಪಾಲಿಟಿಕ್ಸ್- ಧಾರವಾಡ ಜಿಲ್ಲೆಯಲ್ಲಿ ಶುರುವಾಗಿದೆ

ಹುಬ್ಬಳ್ಳಿ: ಇನ್ನೇನು  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಇತ್ತ ರಾಜಕಾರಣದ ಬಣ್ಣವೇ ಬದಲಾಗಿ ಹೋಗಿದೆ. ವಿಪಕ್ಷ ಮುಖಂಡರನ್ನು ಸೆಳೆಯಲು ರಾಜಕೀಯ ಮುಖಂಡರು ಹಲವಾರು ರೀತಿಯಲ್ಲಿ ಹರಸಾಹಸ ಪಡುತಿದ್ದಾರೆ. ಹಾಗೆ ಧಾರವಾಡ ಜಿಲ್ಲೆಯಲ್ಲಿಯೂ ಸಹ ಕಾಂಗ್ರೆಸ್ ನಾಯಕ ಜಗದೀಶ್ ಶೇಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಡುವೆ ಪವರ್ ಪಾಲಿಟಿಕ್ಸ ಶುರುವಾಗಿದೆ.

ಲೋಕ ಸಮರಕ್ಕೂ ಮುನ್ನ ರಂಗೇರಿದೆ  ರಾಜಕೀಯ ಅಖಾಡ ಇನ್ನು ಈ ರಾಜಕಾರಣದಲ್ಲಿ ಲೋಕಸಭೆಗೆ ಮತ್ತೊಂದು ಅದ್ಯಾಯವನ್ನು ಶುರುಮಾಡಿದ್ದಾರೆ.ಇಷ್ಟು ದಿನ ಪಕ್ಷ ಬದಲಾವಣೆಯಿಂದ ಅಧಿಕಾರ ಕಳೆದುಕೊಂಡುದ್ದ ಮಾಜಿ ಸಚಿವ ಜಗದೀಶ್ ಶೆಟ್ಟರ್ ಅವರು ಲೋಕಸಭಾ ಚುನಾವಣೆಯ ಮೂಲಕ ಮತ್ತೆ ರಾಜಕೀಯ ಕಣದಲ್ಲಿ ಹೋರಾಡಲಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಜಾಸ್ತಿ ಇರುವ ಕಾರಣ ಲಿಂಗಾಯತರ ಮತಗಳನ್ನು ಸೆಳೆಯುವ ದೃಷ್ಟಿಕೋನದಿಂದ ಈ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.30 ವರ್ಷದಿಂದ ಅಧಿಕಾರ ರಾಜಕಾರಣದಲ್ಲಿಯೇ ಇದ್ದ ಶೆಟ್ಟರ್ ಅವರಿಗೆ ಅಧಿಕಾರದಿಂದ ದೂರ ಉಳಿಯುವುದು ಕೊಂಚ ತ್ರಾಸೆ ಆಗಿತ್ತು.ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ವಿಧಾನ ಪರಿಷತ್‌ಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ವರಿಷ್ಠರು ಕೈಹಿಡಿಯಬಹುದು ಎಂದು ಶೆಟ್ಟರ್ ನಿರೀಕ್ಷಿಸಿದ್ದರು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಜಗದೀಶ ಶೆಟ್ಟರ್ ಅವರಿಗೆ ಅದೃಷ್ಟ ಕೈಕೊಟ್ಟಿತ್ತು.

ಹಾಗಂತ ಇದೀಗ ಲಿಂಗಾಯತರನ್ನು ಸೆಳೆಯುವ ದೃಷ್ಟಿಯಿಂದ ಮತ್ತು ಹಿರಿಯ ರಾಜಕಾರಣಿ ಎನ್ನುವ ಕಾರಣಕ್ಕೆ ವಿಧಾನ ಪರಿಷತ್ ಸ್ಥಾನ ಕಲ್ಪಿಸಲಾಗಿದೆ.ವರಿಷ್ಕರ ಈ ನಡೆಯಿಂದ ಎರಡು ತರಹದ ಲಾಭವಾಗಿದೆ. ಒಂದು ಜಗದೀಶ ಶೆಟ್ಟರ್, ಅವರಿಗೆ ಪುನಃ ಅಧಿಕಾರ ರಾಜಕೀಯ ಮಾಡುವ ಅವಕಾಶ ಸಿಕ್ಕದಂತಾಗಿದೆ..

ಶೆಟ್ಟರ್ ಪರಿಷತ್ ಸದಸ್ಯರಾಗಿವುದರಿಂದ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಪೈಪೋಟಿ ಶುರುವಾಗಿದೆ. ಬಿಜೆಪಿಯಲ್ಲಿಯೇ ಇದ್ಧಾಗ ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಎರಡೂ ರಾಜಕೀಯ ಶಕ್ತಿ ಕೇಂದ್ರಗಳು.ಆದರೀಗ ಶೆಟ್ಟರ್ ಕಾಂಗ್ರೆಸ್‌ ಸೇರ್ಪಡೆಯಿಂದ ನೇರಾನೇರ ಪ್ರತಿಸ್ಪರ್ಧೆ ಶಕ್ತಿ ಕೇಂದ್ರಗಳು, ಹುಟ್ಟಿಕೊಂಡಂತಾಗಿದೆ.ಮೇಲುಗೈ ಸಾಧಿಸಲು ಇಬ್ಬರೂ ಪ್ರಭಾವಿ ನಾಯಕರು ಹಿಂದೆ ಬೀಳಲಿಕ್ಕಿಲ್ಲ.ಇದರಿಂದಾಗಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಫೈಪೋಟಿ ಎಲ್ಲ ಕಡೆಗಳಲ್ಲಿಯು ಗೋಚರಿಸುತ್ತಿದೆ.

 

Leave a Reply

Your email address will not be published. Required fields are marked *

error: Content is protected !!