ಪಿ.ಆರ್. ತಿಪ್ಪೇಸ್ವಾಮಿ ಜನ್ಮ ಶತಾಬ್ದಿ : 16ರಂದು ಚಿತ್ರ ಬಿಡಿಸುವ ಸ್ಪರ್ಧೆ

ಪಿ.ಆರ್. ತಿಪ್ಪೇಸ್ವಾಮಿ ಜನ್ಮ ಶತಾಬ್ದಿ : 16ರಂದು ಚಿತ್ರ ಬಿಡಿಸುವ ಸ್ಪರ್ಧೆ

ದಾವಣಗೆರೆ: ಕೀರ್ತಿಶೇಷ ಪಿ.ಆರ್. ತಿಪ್ಪೇಸ್ವಾಮಿ ಜನ್ಮ ಶತಾಬ್ದಿ ಅಂಗವಾಗಿ ಎಪ್ರಿಲ್ 16ರಂದು ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದ ಆವರಣದಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಾವಣಗೆರೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಸದಾನಂದ ಹೆಗಡೆ, ಸ್ಪರ್ಧೆಗಳು ನಾಲ್ಕು ವಿಭಾಗಗಳಲ್ಲಿ ನಡೆಯಲಿವೆ ಎಂದು ಹೇಳಇದರು.
ಎಲ್‌ಕೆಜಿ ಯಿಯಂದ 2ನೇ ತರಗತಿ, 3ನೇ ತರಗತಿಯಿಂದ 6ನೇ ತರಗತಿ, 7 ರಿಂದ 10ನೇ ತರಗತಿ ಹಾಗೂ ಹವ್ಯಾಸಿಗಳ ಗುಂಪು ಹೀಗೆ ನಾಲ್ಕು ಗುಂಪುಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪಿಯುಸಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸಬಹುದಾಗಿದೆ.
ಮಾಹಿತಿಗಾಗಿ ಮೊ.9448345584, 9538732777, 9916468579, 9343402497ಗೆ ಸಂಪರ್ಕಿಸುವಂತೆ ಅವರು ಹೇಳಇದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಿ.ಶೇಷಾಚಲ, ಜಂಟಿ ಕಾರ್ಯದರ್ಶಿ ಶಾಂತಯ್ಯ ಪರಡಿಮಠ, ಗಣೇಶ ಶೈಣೈ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!