ಚಿಕ್ಕನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಪ್ರಭಾ ಮಲ್ಲಿಕಾರ್ಜುನ್ ಚಾಲನೆ

ಚಿಕ್ಕನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಪ್ರಭಾ ಮಲ್ಲಿಕಾರ್ಜುನ್ ಚಾಲನೆ

ದಾವಣಗೆರೆ : ನಗರದ ನಿಟುವಳ್ಳಿಯ ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಮಾಜಿ ಸಚಿವರಾದ ಎಸ್ .ಎಸ್ .ಮಲ್ಲಿಕಾರ್ಜುನ್ ಅವರ ಧರ್ಮಪತ್ನಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಮನವಮಿ ಅಂಗವಾಗಿ ರಥೋತ್ಸವ ನಡೆಯುತ್ತಿದ್ದು ಈ ಬಾರಿ ನೂತನವಾಗಿ ರಥೋತ್ಸವವನ್ನು ನಿರ್ಮಿಸಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಎಸ್. ಶೇಖರಪ್ಪ, ಆರ್.ಎಚ್. ನಾಗಭೂಷಣ್, ಪಾಲಿಕೆ ಸದಸ್ಯರಾದ ಸವಿತಾ ಗಣೇಶ್ ಹುಲ್ಮನಿ, ಮಾಜಿ ಮೇಯರ್ ಎಚ್.ಜಯಣ್ಣ,ಮಾಜಿ ಸದಸ್ಯರಾದ ಶ್ರೀಮತಿ ಅನ್ನಪೂರ್ಣ ಪೂಜಾರ್ ಬಸವರಾಜ್, ಹೆಚ್. ಗುರುರಾಜ್ , ಪರಶುರಾಮ್, ಟಿ.ಡಿ. ಹಾಲೇಶ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!