ಪ್ರಜ್ವಲ್ ರೇವಣ್ಣ ಅಶ್ಲೀ ಲ ವೀಡಿಯೋ ಪ್ರಕರಣ : ಬಿಜೆಪಿ ಮುಖಂಡ ದೇವರಾಜೇ ಗೌಡ ಅರೆಸ್ಟ್
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಳಿಕ ನಾಟ್ ರಿಚೇಬಲ್ ಆಗಿದ್ದ ಹಾಸನ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಗುಹಿಲಾಳ್ ಟೋಲ್ ಬಳಿ ಹಿರಿಯೂರು ಪೊಲೀಸರು ದೇವರಾಜೇಗೌಡ ಅವರನ್ನು ಬಂಧಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರಿಗೆ ಹಾಸನ ಪೊಲೀಸರು ನೀಡಿದ್ದ ಮಾಹಿತಿ ಆಧಾರದ ಮೇಲೆ ಬಂಧಿಸಲಾಗಿದೆ.
ವಕೀಲ ದೇವರಾಜೇಗೌಡ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಏಪ್ರಿಲ್ 1 ರಂದು ಸಂತ್ರಸ್ತೆ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ದೇವರಾಜೇಗೌಡರ ಬೆನ್ನು ಬಿದ್ದಿದ್ದರು. ಪೊಲೀಸರು ದೇವರಾಜೇಗೌಡರ ಮೊಬೈಲ್ ಟ್ರ್ಯಾಪ್ ಮಾಡಿ ಅವರನ್ನು ಬಂಧಿಸಲು ಮುಂದಾಗಿದ್ದರು.
ದೇವರಾಜೇಗೌಡ ತಾವಾಗಿಯೇ ಪೊಲೀಸರಿಗೆ ತಸಿಕ್ಕಿಬಿದ್ದಿದ್ದಾರೆ. ಬಂಧನ ಭೀತಿಯಲ್ಲಿದ್ದ ವಕೀಲ ದೇವರಾಜೇಗೌಡ ಪರಾರಿಯಾಗಲು ಮುಂದಾಗಿದ್ದರು. ಪರಾರಿಯಾಗುವ ಮುನ್ನ ತಮ್ಮ ಮೊಬೈಲ್ ಆನ್ ಮಾಡಿ,ಬಳಿಕ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡುವ ವೀಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಶುಕ್ರವಾರ ರಾತ್ರಿ 8 ಗಂಟೆ 5 ನಿಮಿಷಕ್ಕೆ ವಾಟ್ಸಾಪ್ ಗ್ರೂಪ್ವೊಂದಕ್ಕೆ ಕಳುಹಿಸಿದ್ದಾರೆ. ದೇವರಾಜೇಗೌಡರ ಬೆನ್ನು ಬಿದ್ದ ಪೊಲೀಸರಿಗೆ ಅವರ ಮೊಬೈಲ್ ಆನ್ ಆಗಿರುವ ವಿಚಾರ ತಿಳಿದು, ಮೊಬೈಲ್ ನೆಟ್ವರ್ಕ್ ಆಧರಿಸಿ ಹಿರಿಯೂರು ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇವರಾಜೇಗೌಡ 3-4 ಬ್ಯಾಗ್ ಲಗೇಜ್ ಪ್ಯಾಕ್ ಮಾಡಿಕೊಂಡು ಹೊರಟಿದ್ದರು ಎಂದು ತಿಳಿದು ಬಂದಿದೆ.