ಅಕ್ರಮ ಗೋವು ಸಾಗಾಟ ತಡೆದ ಪ್ರಮೋದ್ ಮುತಾಲಿಕ್

ದಾವಣಗೆರೆ: ಅಕ್ರಮವಾಗಿ ಗೋವು ಸಾಗಾಟ ಶಂಕೆ ಹಿನ್ನಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರು ರೆಡ್ ಹ್ಯಾಂಡ್ ಆಗಿ ಗೋವು ರಕ್ಷಣೆ ಮಾಡಿದ ಘಟನೆ ನಡೆದಿದೆ. ದಾವಣಗೆರೆ ನಗರದ ಹಳೇ ಕುಂದುವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಯಿ ಖಾನೆಗೆ ಹೊಯ್ಯುತ್ತಿರುವ ಶಂಕೆ ಹಿನ್ನಲೆ ವಾಹನವನ್ನು ತಡೆದ ಪ್ರಮೋದ್ ಮುತಾಲಿಕ್ ಪಿಕ್ ಅಪ್ ವಾಹನದಲ್ಲಿ ನಾಲ್ಕು ದೊಡ್ಡ ಹಸುಗಳನ್ನು ತುಂಬಿಕೊಂಡು ಹೋಗುತ್ತಿದ್ದ ವೇಳೆ ಹುಬ್ಬಳ್ಳಿಯಿಂದ ದಾವಣಗೆರೆಗೆ ಆಗಮಿಸುತ್ತಿದ್ದ ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅನುಮಾನಗೊಂಡು ಗಾಡಿ ನಿಲ್ಲಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಯಾವುದೇ ದಾಖಲೆ ಇಲ್ಲದೇ ಹಸುಗಳ ಸಾಗಟ ಯತ್ನ ಮಾಡುತ್ತಿರುವಾಗ ಖುದ್ದು ನಿಂತು ವಿದ್ಯಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಇದೆ, ಆದರೂ ಖಾಸಾಯಿ ಖಾನೆಗೆ ಸಾಗಾಟ ಆಗ್ತಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋಂದ್ರಿಂದ ಈ ರೀತಿ ಆಗ್ತಿದೆ ಈ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಆಗಬೇಕೆಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಶ್ರೀ ರಾಮಸೇನೆ ದಾವಣಗೆರೆ ಸದಸ್ಯರು ಆಗಮಿಸಿದ್ದರು, ಸ್ಥಳಕ್ಕೆ ವಿದ್ಯಾನಗರ ಠಾಣೆ ಪಿಐ ಶಿಲ್ಪಾ ಆಗಮಿಸಿ ಪರಿಶೀಲಿಸಿದರು