ವಿದ್ಯುತ್ ಅವಘಡ ತಪ್ಪಿಸಿದ 24 ನೇ ವಾರ್ಡಿನ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

IMG-20221225-WA0070

ದಾವಣಗೆರೆ: ವಿದ್ಯುತ್ ಶಾಕ್ ನಿಂದ ಸಾವು ನೋವುಗಳು ಉಂಟಾಗುವ ಬಗ್ಗೆ ಸ್ಥಳೀಯ ಸಾರ್ವಜನಿಕರ ಮನವಿಗೆ ತುರ್ತಾಗಿ ಸ್ಪಂದಿಸಿ, ವಿದ್ಯುತ್ ಅವಘಡವನ್ನು ತಪ್ಪಿಸಿದ 24 ನೇ ವಾರ್ಡಿನ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಪಿ.ಜೆ ಬಡಾವಣೆ 8 ನೇ ಮುಖ್ಯ ರಸ್ತೆಯ, ತರಕಾರಿ ಅಂಗಡಿ ಬಳಿ ಇರುವ ಪಾಲಿಕೆಯ ಬೀದಿ ದೀಪದಲ್ಲಿ ಆಂತರಿಕ ಶಾರ್ಟ್ ಸರ್ಕ್ಯುಟ್ ನಿಂದಾಗಿ, ಕಂಬದ ಹತ್ತಿರ ನಿಂತವರಿಗೆ ಶಾಕ್ ಹೊಡೆದ ಅನುಭವ ಆಗುತ್ತಿತ್ತು, ಕಳೆದ ಹಲವು ದಿನಗಳಿಂದ ಪಕ್ಕದಲ್ಲೇ ಇದ್ದ ತರಕಾರ ಅಂಗಡಿಗೆ ಬರುವ ಹಲವು ಜನರಿಗೆ, ಮಕ್ಕಳಿಗೆ ಶಾಕ್ ಹೊಡೆದ ಅನುಭವವಾಗಿತ್ತು, ಇದನ್ನು ವಿದ್ಯುತ್ ಇಲಾಖೆ ಲೈನ್ ಮ್ಯಾನ್ ಗಳ ಗಮನಕ್ಕೆ ತಂದರೆ, ಇದು ನಮಗೆ ಸಂಬಂಧ ಬರುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಷಯವನ್ನು ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಅವರ ಗಮಕ್ಕೆ ತಂದ ಕೇವಲ ಅರ್ಧ ಘಂಟೆಯಲ್ಲೇ, ಸ್ಥಳಕ್ಕೆ ಮಹಾನಗರ ಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳನ್ನು ಕರೆಸಿ, ಇದನ್ನು ಸರಿ ಪಡಿಸಲಾಯಿತು.

ಇದರಿಂದಾಗಿ ಆಗಬಹುದಾದ ಭಾರಿ ಅವಘಡ ತಪ್ಪಿದಂತಾಗಿದ್ದು, ಪಾಲಿಕೆ ಸದಸ್ಯರು ತುರ್ತಾಗಿ ಸ್ಪಂದಿಸಿದ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಕೇವಲ ಇದೊಂದೇ ಅಲ್ಲಾ, ಯಾವುದೇ ದೂರಿಗೂ ವೇಗವಾಗಿ ಶೀಘ್ರವಾಗಿ ಸ್ಪಂದಿಸಿ, ಸಮಸ್ಯೆಗಳನ್ನು ಬಗೆಹರಿಸುವ ಪ್ರಸನ್ನ ಕುಮಾರ್ ರವರಿಗೆ ಸ್ಥಳಿಯರಾದ ನಿತೀಶ್ ಧನ್ಯವಾದ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!