ದೈವಜ್ಞ ಸಮಾಜದ ನೂತನ ಆಡಳಿತ ಮಂಡಳಿಗೆ ಪ್ರಶಾಂತ್ ವಿಶ್ವನಾಥ ವೆರ್ಣೇಕರ್ (ಹೆಗಡೆ) ಸಾರಥ್ಯ

Prashant Vishwanath Vernekar (Hegade) is the chairman of the new governing body of Daivajna Samaj.

ದಾವಣಗೆರೆ: ದೈವಜ್ಞ ಸಮಾಜ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಉತ್ತರ‌ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಸಚಿನ್ ಎಸ್ ವೆರ್ಣೇಕರ್ 3ನೇ ಅತಿ ಹೆಚ್ಚು ಮತ ಪಡೆಯುವ ಪ್ರಚಂಡ ಬಹುಮತ ಗಳಿಸಿದ್ದಾರೆ.

ದೈವಜ್ಞ ಸಮಾಜದ ನೂತನ ಆಡಳಿತ ಮಂಡಳಿ ಚುನಾವಣೆ ನಡೆಯಿತು, ಈ ಚುನಾವಣೆಯಲ್ಲಿ ಪ್ರಶಾಂತ್ ವಿಶ್ವನಾಥ ವೆರ್ಣೇಕರ್ (ಹೆಗಡೆ) ಇವರು ನೇತೃತ್ವದ ತಂಡಕ್ಕೆ ಒಟ್ಟು 15 ಸ್ಥಾನಗಳ್ಳಿ 13 ಸ್ಥಾನಗಳ ಪ್ರಚಂಡ ಬಹುಮತ ಸಿಕ್ಕರೆ.

ಸತ್ಯನಾರಾಯಣ ರಾಯ್ಕರ್ ಹಾಗೂ ವಾಸುದೇವ್ ರಾಯ್ಕರ್ ತಂಡಕ್ಕೆ ಕೇವಲ 2 ಸ್ಥಾನ ಸಿಕ್ಕಿದ್ದು, ಇವರ ತಂಡದಿಂದ ನಾಗರಾಜ್ ಅಣಜಿ ಹಾಗೂ ಮಂಜುನಾಥ ವಿ ಕುಡ್ತಲಕರ್ ಗೆಲುವನ್ನ ಸಾಧಿಸಿದ್ದಾರೆ.

ಒಟ್ಟು 2772 ಆಜೀವ ಸದಸ್ಯರಲ್ಲಿ 1944 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ ಪ್ರಶಾಂತ್ ವಿಶ್ವನಾಥ ವೆರ್ಣೇಕರ್ (ಹೆಗಡೆ)
ಅತಿ ಹೆಚ್ಚು ಮತ 1469 ಮತ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ, ಇವರ ನಂತರ ಸತೀಶ್ ಎಸ್ ಸಾನು (ಮುಂಡುಗೋಡ್) ಇವರು 1297 ಮತ ಪಡೆದು 2ನೇ ಸ್ಥಾನ ಪಡೆದಿದ್ದಾರೆ ಮತ್ತು ಸಚಿನ್ 1213 ಮತ ಪಡೆಯುವ ಮುಖಾಂತರ 3ನೇ ಸ್ಥಾನ ಪಡೆದಿದ್ದಾರೆ. ಈ ತಂಡದ ರಾಜೀವ್ ವೆರ್ಣೇಕರ್, ಶಂಕರ್ ವಿಠ್ಠಲಕರ್, ಉಮೇಶ್ ನಾರಾಯಣ್, ಪಾಂಡುರಂಗ ಶ್ರೀನಿವಾಸ್ ಭಟ್, ರಾಘವೇಂದ್ರ ದಿವಾಕರ್, ಮಂಜುನಾಥ ಕರ್ಡೇಕರ್, ರಾಜೇಶ್ ರೇವಣಕರ್, ಸಾಯಿಪ್ರಕಾಶ್ ವರ್ಣೇಕರ್, ರಾಘವೇಂದ್ರ ಕುರ್ಡೇಕರ್ ಗೆಲುವನ್ನ ಸಾಧಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ್ (ಹೆಗಡೆ)
ಇದು ನಿಮ್ಮೆಲ್ಲರ ಗೆಲುವು, ಮತ್ತು‌ ಜನರ ವಿಶ್ವಾಸಕ್ಕೆ ಸಿಕ್ಕ ಜಯ, ದಾವಣಗೆರೆ ದೈವಜ್ಞ ಸಮಾಜದ ದೋಣಿಯನ್ನು, ಹರಿಯುವ ನದಿಯಲ್ಲಿ ಕೊಂಡೊಯ್ಯುವ ಭರವಸೆಗೆ ವಿಶ್ವಾಸವಿಟ್ಟು ಜನರು ನಮಗೆ ಆಶಿರ್ವಾದ ನೀಡಿದ್ದಾರೆ, ದೈವಜ್ಞ ಬ್ಯಾಂಕ್ ಪ್ರಗತಿ ಸಾಧಿಸಿದ್ದಂತೆ, ಸಮಾವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತೇವೆ ಎಂದರು. ಬೆಂಬಲ ನೀಡಿದ ಸಂಪೂರ್ಣ ಸಮಾಜ ಬಾಂಧವರಿಗೆ ಕೋಟಿ ನಮನಗಳು.

ನಂತರ ಮಾತನಾಡಿದ ಸಚಿನ್, ಜನರು ನನಗೆ ಪ್ರೀತಿಸುತ್ತಾರೆ ಅಂತಗೊತ್ತಿತ್ತು, ಆದರೆ ಇಷ್ಟೊಂದು‌ ಪ್ರೀತಿಸುತ್ತಾರೆ ಎಂದು ಇಂದು ತಿಳಿಯಿತು, ಸಣ್ಣ ವಯಸ್ಸಿನಲ್ಲಿ ಇಷ್ಟು ಭಾರೀ ಅಂತರದ ಗೆಲುವಿ ನೊಂದಿಗೆ, ಪರ್ವದಷ್ಟು ಭಾರದ ಜವಾಬ್ದಾರಿ ಕೂಡ ಹೆಗಮೇಲೆ ಬಂದಿದೆ, ಜನರ ವಿಶ್ವಾಸ ಸುಳ್ಳಾಗಲು ಬಿಡುವುದಿಲ್ಲಾ, ಸಮಾಜದ ಉನ್ನತಿಗಾಗಿ ನಾನು ಎಂದೂ ನಿಲ್ಲುತ್ತೇನೆ, ಪೊಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲಾ, ಸಮಾಜವನ್ನು ಮುಖ್ಯವಾಹಿನಿ ತರಲು ಅನೇಕ ಯೋಜನೆಗಳಿವೆ, ಕಷ್ಟದಲ್ಲಿ ಇದ್ದವರ ಪರ ಎಂದಿಗೂ ನಿಲ್ಲುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!