ದುರ್ಗಾಂಭಿಕಾ ದೇವಿ ಜಾತ್ರೆಯ ಪ್ರಯುಕ್ತ ಶೌಚಾಲಯ ವ್ಯವಸ್ಥೆ

ದಾವಣಗೆರೆ : ದಾವಣಗೆರೆ ಮಹಾನಗರದ ಸಾರ್ವಜನಿಕ/ ನಾಗರೀಕರಿಗೆ ದಾವಣಗೆರೆ ಮಹಾನಗರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ದುರ್ಗಾಂಭಿಕಾ ದೇವಿ ಜಾತ್ರೆಯ ಪ್ರಯುಕ್ತ ಲಕ್ಷಾಂತರ ಜನರು ಭಾಗವಹಿಸುವ ಕಾರಣ ಜಾತ್ರೆಯ ಉತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮಾ.14 ರಿಂದ 16 ರವರೆಗೆ ವಿರಕ್ತ ಮಠ, ದೊಡ್ಡಪೇಟೆ, ನಗರ ಕುಟುಂಬ ಕಲ್ಯಾಣ ಕೇಂದ್ರ-1, ದೊಡ್ಡಪೇಟೆ, ಎಸ್. ವಿ. ಎಸ್ ಶಾಲೆ, ಎಸ್.ಕೆ.ಪಿ. ರಸ್ತೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘ (ರಿ), #708, ಎಸ್.ಕೆ.ಪಿ. ದೇವಸ್ಥಾನದ ರಸ್ತೆ, ಮಾರ್ಕೇಂಡೇಶ್ವರ ಕಲ್ಯಾಣ ಮಂಟಪ, ಎಸ್. ಕೆ. ಪಿ. ರಸ್ತೆ, ನಾಮದೇವ ಸಿಂಪಿ ಕಲ್ಯಾಣ ಮಂಟಪ, ದೊಡ್ಡಪೇಟೆ, ದಾವಣಗೆರೆ. ಈ ಸ್ಥಳಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.