ವಿಜಯ ಸಂಕಲ್ಪ ಯಾತ್ರೆ ಸಮಾರೋಪದ ಮಹಾಸಂಗಮಕ್ಕೆ ಪ್ರಧಾನಿ ಮೋದಿ ಚಾಲನೆ

ದಾವಣಗೆರೆ: ನಗರದ ಜಿಎಂಐಟಿಯ 400 ಎಕರೆ ಜಮೀನಿನಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪದ ಮಹಾಸಂಗಮಕ್ಕೆ ಪ್ರಧಾನಿ ಮೋದಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು. ನಂತರ ತೆರೆದ ವಾಹನದಲ್ಲಿ ಸಿಎಂ ಬೊಮ್ಮಾಯಿ ಜತೆ ಪೆಂಡಾಲ್‌ನಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಮೋದಿ ಮತ್ತು ಸಂಗಡಿಗರಿಗೆ ಹೂವಿನ ಸುರಿಮಳೆ ಸುರಿಸಲಾಯಿತು. ತೆರೆದ ವಾಹನದಲ್ಲಿದ್ದ ಮೋದಿ ಕೈ ಬೀಸುವ ಮೂಲಕ ಜನರನ್ನು ಸಂತೋಷ ಪಡಿಸಿದರು. 2023ರ ಚುನಾವಣೆಗೆ ದಾವಣಗೆರೆಯಿಂದ ರಣಕಹಳೆ ಮೊಳಗಿಸಲಾಯಿತು. ಮೋದಿ ವೇದಿಕೆ ಆಗಮಿಸುತ್ತಿದ್ದಂತೆ ಜನರ, ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತುಘಿ.
ಬಿಜೆಪಿ ಮುಖಂಡರು ಹಲವಾರು ಕಾರ್ಯಕರ್ತರು ಜೆಎಂಐಟಿ ಹೆಲಿಪ್ಯಾಡ್‌ನಲ್ಲಿ ಸ್ವಾಗತಿಸಿದರು. ನಂತರ ಮಹಾಸಂಗಮ ನಡೆಯುವ ಸ್ಥಳಕ್ಕೆ ಬಿಗಿ ಭದ್ರತೆಯಲ್ಲಿ ಕಾರಿನಿಂದ ತೆರಳಿದ ಮೋದಿ, ಪೆಂಡಾಲ್ ಹಾಕಿದ್ದ ಸ್ಥಳದಿಂದ ವಿಶೇಷ ವಾಹನದಲ್ಲಿ ವೇದಿಕೆಯವರೆಗೆ ಜನರಿಗೆ ಕೈ ಬೀಸುತ್ತಾ ಆಗಮಿಸಿದರು. ಈ ವೇಳೆ ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಮೋದಿ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು. ಕಾರು, ಲಾರಿ, ಬಸ್ ಗಳ ಮೂಲಕ ಲಕ್ಷಾಂತರ ಜನರು ಬೆಣ್ಣೆನಗರಿಗೆ ಬಂದಿದ್ದರು. ದಾವಣಗೆರೆ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ವಿಜಯನಗರ, ಗದಗ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಿಂದ ಜನರು ಆಗಮಿಸಿದ್ದರು. ಬಿಜೆಪಿ ಮುಖಂಡರು, ಶಾಸಕರು ಬಸ್ ಗಳ ವ್ಯವಸ್ಥೆ ಮಾಡಿದ್ದು, ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಮಹಾಸಂಗಮಕ್ಕೆ ಬಂದರು. ಸಾವಿರಾರು ಬಸ್ ಗಳಲ್ಲಿ ಜನರು ಆಗಮಿಸಿದ್ದು, 10ಸಾವಿರ ಬಸ್ ಗಳ ಮೂಲಕ ಕರೆತರಲಾಯಿತು. ಕಾರ್ಯಕರ್ತರು, ಲಕ್ಷಾಂತರ ಜನರಿಗಾಗಿ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಲಕ್ಷಾಂತರ ಮಂದಿಗೆ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆನೇಮಕವಾಗಿದ್ದ ಕೇಸರಿ ಕಲಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಮಜ್ಜಿಗೆ ಹಾಗೂ ಕುಡಿಯುವ ನೀರು ವಿತರಣೆಗೂ ಕ್ರಮ ಕೈಗೊಳ್ಳಲಾಗಿತ್ತು.
ಜಿಎಂಐಟಿಯಲ್ಲಿ ಮಾಧ್ಯಮದರ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 140 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆಶೀರ್ವಾದದಿಂದ ಇದು ಸಾಧ್ಯವಾಗಲಿದೆ. ಕೆಲವರು ನಾವೇ ಮುಖ್ಯಮಂತ್ರಿ ಆಗುತ್ತೇವೆ ಎಂಬ ಭ್ರಮೆಯಲಿದ್ದಾರೆ. ಇದು ತಿರುಕನ ಕನಸು. ಅದು ನನಸಾಗುವುದಿಲ್ಲ ಎಂದು ಭವಿಷ್ಯ ನುಡಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ರಾಜ್ಯದೆಲ್ಲೆಡೆ ಸಂಚರಿಸಿದೆ. ಎಲ್ಲೆಡೆ ಬಿಜೆಪಿ ಪರ ಅಲೆ ಕಂಡು ಬಂದಿದೆ. ಉತ್ಸಾಹವೂ ಹೆಚ್ಚಾಗಿದೆ. ದಾವಣಗೆರೆಯಲ್ಲಿ ಮಹಾಸಂಗಮಕ್ಕೆ ಸೇರಿರುವ ಜನಸ್ತೋಮವೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಸಿಟಿ ಸ್ಥಬ್ದ : ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲ ಕಡೆ ಸಂಚಾರ ಬಂದ್ ಮಾಡಲಾಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅಷ್ಟೋಂದು ಜನ ಕಾಣಲಿಲ್ಲಘಿ. ಆದರೆ ಮಧ್ಯಾಹ್ನ 2 ರನಂತರ ಜನಸಾಗರ ಹರಿದು ಬಂದಿತು. ಎತ್ತ ಕಣ್ಣಾಯಿಸಿದರೂ ಕೇಸರಿ ಬಾವುಟಗಳು ಕಾಣುತ್ತಿದ್ದವು. ಎದೆ ಮೇಲೆ ಮೋದಿ ಹಚ್ಚೆ ಹಾಕಿಸಿಕೊಂಡ ಯುವಕನೊಬ್ಬ ಮೋದಿಗೆ ಜೈಕಾರ ಹಾಕಿದನು. ಮಜ್ಜಿಗೆಗಾಗಿ ಸಾವಿರಾರು ಜನರು. ಮುಗಿ ಬಿದ್ದಿದ್ದರು. ಬೆ:ಗ್ಗೆ ಉಪ್ಪಿಟ್ಟು, ಕೇಸರಿ ಬಾತ್, ಮಧ್ಯಾಹ್ನ ಗೋಧಿ ಪಾಯಸ, ಪಲಾವ್, ಮೊಸರನ್ನವನ್ನು ಲಕ್ಷಾಂತರ ಮಂದಿ ಭಾಗವಹಿಸಿದ್ದರು. ದಾವಣಗೆರೆಯ ಪಿ. ಬಿ. ರಸ್ತೆಯಿಂ ಸುಮಾರು ಆರೇಳು ಕಿಲೋಮೀಟರ್ ವರೆಗೆ ಬಿಜೆಪಿ ಬಾವುಟಗಳು, ಫ್ಲೆಕ್ಸ್ , ಬಂಟಿಂಗ್ಸ್, ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿಯೂ ಬಾವುಟಗಳನ್ನು ಕಟ್ಟಲಾಗಿತ್ತು. ನರೇಂದ್ರ ಮೋದಿ ಅವರ ಭಾವಚಿತ್ರಗಳು ಕಣ್ಣಿಗೆ ನೋಡುಗರ ಗಮನಸೆಳೆಯಿತು. ಅದರಲ್ಲೂ ಸರ್ಜಿಕಲ್ ಆಪರೇಷನ್ ಬೋರ್ಡ್ ದೇಶಭಿಮಾನವನ್ನು ಮೆರೆಯಲಾಗಿತ್ತು.