ಬಿಜೆಪಿ ಯಿಂದ ಪರಿಸರ ಸಂರಕ್ಷಣೆಗೆ ಲಕ್ಷ ಬೀಜದ ಉಂಡೆ ತಯಾರಿಕೆಗೆ ಸಚಿವರಿಂದ ಚಾಲನೆ

ದಾವಣಗೆರೆ: ಜಿಲ್ಲಾ ಬಿಜೆಪಿ ವತಿಯಿಂದ ಪ್ರಕೃತಿಯ ಸಂರಕ್ಷಣೆಗಾಗಿ ಹಮ್ಮಿಕೊಂಡಿದ್ದ ಲಕ್ಷ ಬೀಜದ ಉಂಡೆಗಳ ತಯಾರಿಕೆಯ ಸೇವಾ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್ ಜಗದೀಶ್, ರಾಜ್ಯ ಕಾರ್ಯದರ್ಶಿಗಳಾದ ಸುಧಾ ಜಯರುದ್ರೇಶ್, ಜಿಲ್ಲಾ ಸಂಘಟನೆ ಪ್ರಭಾರಿ ಗಳಾದ ಜೇಷ್ಠ ಪಡಿವಾಳ, ಮಾಜಿ ಮುಖ್ಯ ಸಚೇತಕರಾದ ಡಾ|| ಎ.ಹೆಚ್.ಶಿವಯೋಗಿ ಸ್ವಾಮಿ, ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರುಗಳಾದ ಸೋಗಿ ಶಾಂತಕುಮಾರ್, ಯೋಗೇಶ, ಜಯಪ್ರಕಾಶ, ಗೋಣೆಪ್ಪ, ಉಪಾಧ್ಯಕ್ಷರುಗಳಾದ ಮಂಜ ನಾಯಕ್, ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ವಕ್ತಾರರಾದ ಡಿ.ಎಸ್ ಶಿವಶಂಕರ, ಜಿಲ್ಲಾ ಕಾರ್ಯದರ್ಶಿಗಳಾದ ಗೌಳಿ ಲಿಂಗರಾಜ, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿಶ್ವಾಸ್ ಎಚ್. ಪಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಮಹೇಶ್, ಎಸ್ ಸಿ ಮೋರ್ಚಾ ಹನುಮಂತ ನಾಯಕ್, ಎಸ್ ಟಿ ಮೋರ್ಚಾ ಕೃಷ್ಣಕುಮಾರ, ಯುವ ಮೋರ್ಚಾ ಶಿವಪ್ರಕಾಶ್ ಮತ್ತು ಪ್ರಧಾನ ಕಾರ್ಯದರ್ಶಿಗಳು ಪಕ್ಷದ ಮುಖಂಡರಾದ ದೇವರಮನೆ ಶಿವಕುಮಾರ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.