ಕಿವಿಯಲ್ಲಿ ಕಮಲದ ಹೂವು ಇಟ್ಟುಕೊಂಡು ಪ್ರತಿಭಟನೆ
ದಾವಣಗೆರೆ: ಬಿಜೆಪಿ ಸರ್ಕಾರ ನಾಯಕ ಸಮುದಾಯಕ್ಕೆ ಕೊಟ್ಟಿದ್ದ ಭರವಸೆ ಈಡೇರಿಸದಿರುವುದನ್ನ ಖಂಡಿಸಿ ‘ಬೇಡರ ಕಿವಿಯಲ್ಲಿ ಕಮಲ’ ಎಂಬ ಘೋಷಣೆಯೊಂದಿಗೆ ನಾಯಕ ಸಮುದಾಯ ಕಿವಿಯಲ್ಲಿ ಕಮಲದ ಹೂವು ಇಟ್ಟುಕೊಳ್ಳುವ ಮೂಲಕ ನಗರದ ರಾಜ ವೀರಮದಕರಿ ನಾಯಕ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದೆ.
ಇದೇ ವೇಳೆ ಮಾತನಾಡಿದ ಸಮಾಜದ ಯುವ ಮುಖಂಡ ಪಿ.ಬಿ. ಅಂಜುಕುಮಾರ್, ಈ ಹಿಂದೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಚಿತ್ರದುರ್ಗದಲ್ಲಿ ಮದಕರಿ ನಾಯಕರ 100 ಕೋಟಿ ವೆಚ್ಚದ ಥೀಮ್ ಪಾರ್ಕ್ ಮಾಡುವುದಾಗಿ ಘೋಷಿಸಿದ್ದು, ಇದುವರೆಗೂ ಸರ್ಕಾರ ಕಾರ್ಯಪ್ರವೃತ್ತವಾಗಿಲ್ಲ ಹಾಗೂ ನಮ್ಮ ಸಮುದಾಯದ ನಾಯಕ ಬಿ.ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿ ಬಿಜೆಪಿ ಸರ್ಕಾರ ಮಾತು ತಪ್ಪಿದೆ. ಇದರಿಂದ ನಮ್ಮ ನಾಯಕ ಸಮಾಜಕ್ಕೆ ನೋವುಂಟಾಗಿದೆ ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಬಿ. ವೀರಣ್ಣ, ಆರ್.ದೇವೇಂದ್ರಪ್ಪ, ಕೆ.ಎಂ.ಚನ್ನಬಸಪ್ಪ, ಟಿ.ಎಸ್.ಕರಿಯಪ್ಪ, ದೇವರಾಜ ಕಾಟೇಹಳ್ಳಿ, ರಾಜು ಮದಕರಿ, ಪಿ.ಆಜ್ಜಯ್ಯ, ಪ್ರವೀಣಕುಮಾರ್ ನಾಯಕ, ಆಂಜನೇಯ, ಗುರುರಾಜ್ ಎನ್, ಉಮೇಶ ಮದಕರಿ, ಪ್ರಭು ನೇರ್ಲಿಗಿ, ಬೆಳವನೂರು ದೇವಿ, ಜಿ. ಶಾಮ್, ಕೆ. ಸುನೀಲ್, ಮಲ್ಲಿಕಾರ್ಜುನ್, ಎಂ.ಆರ್. ನಿಖಿಲ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.