“ಪೃಥ್ವಿ”ಯಲ್ಲಿ ಲೀನನಾದ “ಆಕಾಶ್”

ಬೆಂಗಳೂರು : ಶುಕ್ರವಾರ ಅಸ್ತಂಗತರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ಇಂದು ಕಂಠೀರವ ಸ್ಟುಡಿಯೋದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇಂದು ನಸುಕಿನಲ್ಲಿಯೇ ಕಂಠೀರವ ಕ್ರೀಡಾಂಗಣ ದಿಂದ ಅಂತಿಮ ಯಾತ್ರೆ ಹೊರಟು 5.50 ರ ವೇಳೆಗೆ ಕಂಠೀರವ ಸ್ಟೇಡಿಯಂ ತಲುಪಿತು
ತಂದೆ ವರನಟ ಡಾ. ರಾಜಕುಮಾರ್ ಹಾಗೂ ತಾಯಿ ಪಾರ್ವತಮ್ಮ ರಾಜಕುಮಾರ್ ಸಮಾಧಿ ಪಕ್ಕದಲ್ಲಿಯೇ ಪುನೀತ್ ರಾಜಕುಮಾರ್ ಚಿರನಿದ್ರೆಗೆ ಜಾರಿದರು
ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಮಾಡಲಾಯಿತು ಪುನೀತ್ ರಾಜಕುಮಾರ್ ಅವರಿಗೆ ಗಂಡು ಸಂತಾನವಿಲ್ಲದ ಕಾರಣ ಸಹೋದರನ ಪುತ್ರನಾದ ವಿನಯ ರಾಜಕುಮಾರ್ ಅವರು ವಿಧಿವಿಧಾನ ಮಾಡಿದರು
ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮಗಳು ದೃತಿ, ವಂದನ, ಸಹೋದರ ಶಿವರಾಜ್ ಕುಮಾರ್,ರಾಘವೇಂದ್ರ ರಾಜಕುಮಾರ್ ಅವರ ಕಣ್ಣೀರು ನೋಡುಗರ ಮನಕಲಕುವಂತಿತ್ತು
ಅಂತ್ಯಕ್ರಿಯೆಯಲ್ಲಿ ಸಿನಿಮಾರಂಗದ ಕೆಲವರು ಆಗ ರಾಜಕಾರಣಿಗಳಿಗೆ ಗಣ್ಯರಿಗೆ ಅವಕಾಶ ಮಾಡಿಕೊಡಲಾಯಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್,ಮುನಿರತ್ನ, ರಾಜುಗೌಡ, ಚಲನಚಿತ್ರ ರವಿಚಂದ್ರನ್, ರಾಮ್ ಕುಮಾರ್, ಮುಂತಾದ ಗಣ್ಯರು ಭಾಗವಹಿಸಿದ್ದರು.
ಮಂಗಳವಾರ ಹಾಲುತುಪ್ಪ ಕಾರ್ಯವನ್ನು ಮಾಡಲಾಗುವುದೆಂದು ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಕಂಠೀರವ ಸ್ಟುಡಿಯೋದಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಆದೇಶ ಹೊರಡಿಸಿದ್ದಾರೆ