ನವೆಂಬರ್ 8 ರಂದು ಹೊನ್ನಾಳಿಯಲ್ಲಿ ಪುನೀತ್ ಸಂಗೀತ ನಮನ: ರೇಣುಕಾಚಾರ್ಯ ಅಭಿಮಾನಿ ಬಳಗ ಆಯೋಜನೆ

ದಾವಣಗೆರೆ: ಎಂ. ಪಿ. ರೇಣುಕಾಚಾರ್ಯ ಅಭಿಮಾನಿ ಬಳಗದ ವತಿಯಿಂದ ಪ್ರತಿಭಾವಂತ ಯುವನಾಯಕ ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮವನ್ನು ಇದೇ ನ.8 ರಂದು ಸಂಜೆ 5 ಗಂಟೆಗೆ ಹೊನ್ನಾಳಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಹಮ್ಮಿಕೊಳ್ಳಲಾಗಿದದೆ.
ನಟರಾಜ್ ಎಂಟರ್ಟೈನರ್ಸ್ ಸಾರಥ್ಯದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ತಂಡ, ಖ್ಯಾತ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.