ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ – 3 ತಿಂಗಳಾದ್ರೂ ಪೇಮೆಂಟ್ ಬಿಡುಗಡೆಯಾಗಿಲ್ಲ : ಸಂಸದ ಜಿ ಎಂ ಸಿದ್ದೇಶ್ವರ ಅಸಮಾಧಾನ
ದಾವಣಗೆರೆ : ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿ ಮೂರು ತಿಂಗಳಾದರೂ ಇನ್ನೂ ರೈತರಿಗೆ ಪೇಮೆಂಟ್ ಹಣ ಬಿಡುಗಡೆಯಾಗದ ಹಿನ್ನೆಲೆ ಸಂಸದರು ಸಚಿವರ ಗಮನಕ್ಕೆ ತಂದರು. ರೈತರ ಸಂಕಷ್ಟ ಅರಿತು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಸಿದ್ದೇಶ್ವರ. ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿದಿದೆ ಕೂಡಲೇ ಭತ್ತದ ಖರೀದಿ ಕೇಂದ್ರ ಆರಂಭಿಸಬೇಕು. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟನೆ. ಈ ಕುರಿತು ಆಹಾರ ಸಚಿವರೊಂದಿಗೆ ಮಾತಾನಾಡಿ ಮಾಹಿತಿ ನೀಡಿದ್ದೇನೆ ಕೆಲವೇ ದಿನಗಳಲ್ಲಿ ರಾಗಿ ಖರೀದಿ ಹಣ ಬಿಡುಗಡೆಯಾಗಲಿದೆ. ಜೊತೆಗೆ ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಚರ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಜಿಲ್ಲೆಯಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಇಲ್ಲ :
ಆಕ್ಷೇಪ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ ಭೈರತಿ ಬಸವರಾಜ್. ದಾವಣಗೆರೆಯಲ್ಲಿ ಕೋವಿಡ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿದವರ ಸಂಖ್ಯೆ ವಿರಳ. ಗುಂಪುಗುಂಪಾಗಿ ಓಡಾಟ ಹೆಚ್ಚಾಗಿದೆ ಪರಿಸ್ಥಿತಿ ಹೀಗೆ ಮುಂದುವರಿದರೆ ಕೋವಿಡ್ ನಿಯಂತ್ರಣ ಕಷ್ಟ ಎಂದರು. ಈ ಬಗ್ಗೆ ಎಸ್ಪಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಅವರು ಹೆಚ್ಚು ಕಾಳಜಿವಹಿಸಬೇಕು ಗ್ರಾಮೀಣ ಭಾಗದಲ್ಲಿ ಡಂಗೂರ ಸಾರಿಸಿ ಮಾಸ್ಕ ಧರಿಸುವ ಜೊತೆಗೆ ಲಾಕ್ಡೌನ್ ನಿಯಮಾವಳಿ ಪಾಲಿಸುವಂತೆ ಜನರಿಗೆ ಜಾಗೃತಿ ಮೂಡಿಸಬೇಕು ತಪ್ಪಿದ್ರೆ ದಂಡ ವಿಧಿಸಿರಿ ಎಂದು ಸಚಿವ ಭೈರತಿ ಬಸವರಾಜ್.ಪೊಲೀಸರಿಗೆ ಖಡಕ್ ವಾರ್ನಿಂಗ್ ನೀಡಿದರು.
ಅಗತ್ಯವುಳ್ಳವರಿಗೆ ಲಾಡ್ಜ್ ಗಳಲ್ಲಿ ಐಸೋಲೇಶನ್ಗೆ ವ್ಯವಸ್ಥೆ :
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕೋವಿಡ್ ಸಭೆಯಲ್ಲಿ ಮಾತನಾಡಿದ ಅವರು ಯಾರಿಗೆ ಲಾಡ್ಜ್ ವೆಚ್ಚ ಭರಿಸುವ ಶಕ್ತಿ ಇದೆ ಅಂತಹವರಿಗೆ ಲಾಡ್ಜ್ ಗಳಲ್ಲಿ ಐಸೋಲೇಶನ್ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಇದರಿಂದ ಲಾಡ್ಜ್ ಗಳ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಿದಂತಾಗುತ್ತದೆ.ಬೆಂಗಳೂರು ಮಾದರಿಯಲ್ಲಿ ಲಾಡ್ಜ್ ಐಸೋಲೇಶನ್ ವ್ಯವಸ್ಥೆ ಬಗ್ಗೆ ಸಲಹೆ
ನೀಡಿ ಪರವಾನಗಿ ಕೇಳಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ. ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅತ್ಯಗತ್ಯವಿದ್ದರೆ ಮಾತ್ರ ಇಂಥ ಪ್ರಕರಣಕ್ಕೆ ಪರವಾನಗಿ ನೀಡಬಹುದು ಆದರೆ ಲಾಡ್ಜಿನ ಸಂಪೂರ್ಣ ವೆಚ್ಚವನ್ನು ಸೋಂಕಿತರೇ ಭರಿಸಬೇಕು ಎಂದು ಅವರು ತಿಳಿಸಿದರು.