ಹರಿಹರದ ಗಾಂಧಿನಗರದಲ್ಲಿ ಮಳೆ ಬಂದ್ರೆ ಜನರ ಗೋಳು ಕೇಳೊರಿಲ್ಲಾ.!
ಹರಿಹರ: ಹರಿಹರ ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದಾಗಿ ಇಲ್ಲಿನ ಗಾಂಧಿನಗರದಲ್ಲಿ ಕೆರೆಯಂತಾಗಿದ್ದು, ವಾಹನ ಸವಾರರು, ಪಾದಚಾರಿಗಳು ತೀವ್ರ ಪರದಾಡುವಂತಾಯಿತು.
ಪ್ರತಿ ಭಾರಿಯೂ ಈ ನಗರದಲ್ಲಿ ಮಳೆ ಬಂತೆಂದರೆ ಜನರು ತೀವ್ರ ಪರದಾಟ ಅನುಭವಿಸುವಂತಾಗುತ್ತದೆ. ಹಲವು ಬಾರಿ ಸ್ಥಳೀಯರು ಈ ಸಮಸ್ಯೆಯನ್ನು ಸರಿ ಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನ ಮಾತ್ರ ಶೂನ್ಯ.
ಯಾವ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಪರಿಹಾರ ಮಾತ್ರ ಕೊಡುತ್ತಿಲ್ಲ. ಇದರಿಂದ ಇಲ್ಲಿನ ಸ್ಥಳೀಯರು ಮಳೆಗಾಲ ಬಂತೆಂದರೆ ಸಾಕು ಮನೆಯಿಂದ ಹೆಜ್ಜೆ ಕಿತ್ತಿಡಲು ಯೋಚಿಸುವ ಸ್ಥಿತಿ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನಾದರೂ ಜನರ ಬವಣೆ ತಪ್ಪುತ್ತದಾ ಕಾದು ನೋಡಬೇಕಿದೆ.