ಅಕಾಲಿಕ ಮಳೆ.! ನೆಲ ಕಚ್ಚಿದ 40 ಹೆಕ್ಟೇರ್ ಭತ್ತ, ಪರಿಹಾರಕ್ಕೆ ರೈತರ ಆಗ್ರಹ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಅಕಾಲಿಕ ಮಳೆಯಿಂದ ಕಟಾವಿಗೆ ಬಂದಿದ್ದ ಸುಮಾರು 40 ಹೆಕ್ಟೇರ್ ಗೂ ಹೆಚ್ಚು ಭತ್ತದ ಫಸಲು ನೆಲಕ್ಕೆ ಬಿದ್ದು ಆಪಾರ ನಷ್ಟ ಉಂಟಾಗಿದೆ ಎಂದು ಶ್ಯಾಗಲೆ ಗ್ರಾಮದ ರೈತರು ತಿಳಿಸಿದ್ದಾರೆ.
ಗ್ರಾಮದ ಭತ್ತದ ಬೆಳೆ ರೈತರಾದ ಗುಡುದಪ್ಪ. ಪರಮೇಶ್ವರಪ್ಪ. ಗೌಡ್ರ ಮಂಜುನಾಥ್ ಎಂಬುವರು ಗುಣಮಟ್ಟದ ಭತ್ತ ನಾಟಿ ಮಾಡಿದ್ದರು. ಭತ್ತ ಉತ್ತಮ ವಾಗಿ ಬೆಳೆದು ನಿಂತಿದ್ದು ಇನ್ನೇನು ವಾರದಲ್ಲಿ ಕೊಯ್ಲು ಮಾಡುವ ಹಂತದಲ್ಲಿತ್ತು. ಆದರೆ ನಿನ್ನೆ ಹಠಾತ್ ನೇ ಬಿರುಗಾಳಿ ಸಹಿತ ಮಳೆ ಸುರಿದು ಗದ್ದೆಯಲ್ಲಿನ ಹಲವಾರು ರೈತರ ಫಸಲು ನೆಲ ಕಚ್ಚಿ ಬಿದ್ದು ಕೊಯ್ಲು ಮಾಡಲು ಬರದಂತೆ ಆಗಿದೆ ಎಂದು ಗ್ರಾಮದ ರೈತರಾದ ಗುಡುದಪ್ಪ. ಪರಮೇಶ್ವರಪ್ಪ ಮಂಜುನಾಥ್ ತಿಳಿಸಿದ್ದಾರೆ.
ವಿಪರೀತ ದುಬಾರಿ ಬೆಲೆಯ ಗೊಬ್ಬರ, ಔಷಧಿ. ಸೇರಿದಂತೆ
ಎಕರೆಗೆ 30 ಸಾವಿರ ವೆಚ್ಚ ಮಾಡಲಾಗಿದೆ. ಅಕಾಲಿಕ ಮಳೆಯಿಂದ ಕಟಾವಿಗೆ ಬಂದ ಭತ್ತ ನೆಲ ಕಚ್ಚಿದ್ದರಿಂದ ನೆಲದಲ್ಲಿ ಮೊಳೆಕೆಯೊಡೆದು ಕೊಯ್ಲು ಮಾಡೋದು ಕಷ್ಟ. ಮಾರುಕಟ್ಟೆ ಯಲ್ಲಿ ಬೆಲೆಯೂ ಸಿಗಲ್ಲ ಎಂದು ರೈತರು ನೋವು ತೋಡಿಕೊಂಡರು.
ಕೂಡಲೇ ಸ್ಥಳಕ್ಕೆ ಕೃಷಿ ಅಧಿಕಾರಿಗಳು. ಜಿಲ್ಲೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟ ಉಂಟಾಗಿರುವ ಭತ್ತದ ಜಮೀನು ಗಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಶ್ಯಾಗಲೆ ಗ್ರಾಮದ ಶರಣಪ್ಪ. ಎಪಿಎಂಸಿ ಸದಸ್ಯ ರಾದ ಮಂಜುನಾಥ್ ಮತ್ತು ನಷ್ಟ ಹೊಂದಿರುವ ರೈತರು ಒತ್ತಾಯಿಸಿದ್ದಾರೆ.