ರಾಜ್ಯ ಯುವ ಕಾಂಗ್ರೆಸ್ ವಕ್ತಾರರಾಗಿ ದಾವಣಗೆರೆಯ ಸಾಗರ್ ಎಲ್ ಹೆಚ್ ಹಾಗೂ ಚಿರಂಜೀವಿ ಆಯ್ಕೆ

ದಾವಣಗೆರೆ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷರರಾಗಿದ್ದ ಸಾಗರ.ಎಲ್.ಹೆಚ್. ಹಾಗೂ ದಾವಣಗೆರೆ ನಗರದ ಚಿರಂಜೀವಿ ರವರು ರಾಜ್ಯ ಯುವ ಕಾಂಗ್ರೆಸ್ ನ ರಾಜ್ಯ ವಕ್ತಾರರಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಅಭಿನಂದನೆಗಳನ್ನ ತಿಳಿಸಿದ್ದಾರೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ 9- 11 -2021 ರಂದು ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯ ವಕ್ತಾರರ ಆಯ್ಕೆಗಾಗಿ ನಡೆದ ಯಂಗ್ ಇಂಡಿಯಾ ಕೆ ಬೋಲ್ ಭಾಷಣ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾಗಿರುವ ಸಾಗರ.ಎಲ್.ಹೆಚ್. ಹಾಗೂ ದಾವಣಗೆರೆ ನಗರದ ಚಿರಂಜೀವಿರವರು ರಾಜ್ಯದ 22 ಜನ ವಕ್ತಾರರ ಸ್ಥಾನದಲ್ಲಿ ದಾವಣಗೆರೆ ಜಿಲ್ಲೆಯಿಂದ ಇಬ್ಬರೂ ಆಯ್ಕೆಯಾಗಿದ್ದು ಇವರಿಗೆ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಎಲ್ಲಾ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಗಳ ವತಿಯಿಂದ ತುಂಬು ಹೃದಯದ ಅಭಿನಂದನೆಗಳು
ರಾಕೇಶ್ ಜಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಇಲಾಖೆ