ಪಡಿತರ ವಿತರಣೆಯಲ್ಲಿನ ಅಕ್ರಮ ಖಂಡಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿ ಪ್ರತಿಭಟನೆ

ದಾವಣಗೆರೆ: ಪಡಿತರ ವಿತರಣೆಯಲ್ಲಿನ ಅಕ್ರಮ ಖಂಡಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರವಾದಿ ಸಾಲುಮರದ ವೀರಾಚಾರಿ ನೇತೃತ್ವದಲ್ಲಿ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮಸ್ಥರು ಬುಧವಾರ ಜಿಲ್ಲಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನೇಕ ಗ್ರಾಮಸ್ಥರು ಸೇರಿ ಪಡಿತರ ವಿತರಣೆ ಅಕ್ರಮ ಖಂಡಿಸಿ ಘೋಷಣೆ ಕೂಗಿ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು.
ಸರ್ಕಾರ ಬಡ ಜನರಿಗೆ ಪಡಿತರ ವ್ಯವಸ್ಥೆಯ ಮೂಲಕ ಉಚಿತ ಅಕ್ಕಿ ವಿತರಿಸುತ್ತಿದ್ದರೂ ಮಿಟ್ಲಕಟ್ಟೆಯಲ್ಲಿ ಪಡಿತರ ವಿತರಣೆಯ ಪರವಾನಿಗೆ ಪಡೆದಿರುವ ಸಿದ್ದರಾಮಪ್ಪ
ಎಂಬುವರು ಕಳೆದ 20 ತಿಂಗಳಿನಿದ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಪ್ಪ ತೂಕದಲ್ಲಿ ಕಡಿಮೆ ಮಾಡಿ, ಸುಮಾರು 15 ಕ್ವಿಂಟಲ್ ಅಕ್ಕಿಯನ್ನು
ಪ್ರತಿ ತಿಂಗಳು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ತಕ್ಷಣವೇ
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನಾಗೇಂದ್ರಪ್ಪ, ಮನೋಜ್, ಸಿ.ನಿಂಗಪ್ಪ, ಹೆಚ್.ಮಲ್ಲೇಶ್,
ಮಂಜಪ್ಪ, ರಾಜಪ್ಪ, ಶಶಿಧರ, ಅಂಜಿನಪ್ಪ, ಮಂಜಮ್ಮ ಮತ್ತಿತರರು
ಹಾಜರಿದ್ದರು.