ಮಾ.12ರಂದು ರಂಗಚಾವಡಿ ಸಂವಾದ ಕಾರ್ಯಕ್ರಮ

Pn-3 (1)

ದಾವಣಗೆರೆ: ಕರ್ನಾಟಕ ನಾಟಕ ಅಕಾಡೆಮಿ ಸಹಕಾರದೊಂದಿಗೆ ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಹಾಗೂ ಗೆಳೆಯರ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ‘ರಂಗಚಾವಡಿ’ ಸಂವಾದ ಕಾರ್ಯಕ್ರಮವು ಮಾ.12ರಂದು ಬೆಳಿಗ್ಗೆ 10:30ಕ್ಕೆ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಜಾನಪದ ತಜ್ಞ ಡಾ.ಎಂ. ಜಿ. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ‘ರಂಗಭೂಮಿಯ ಶಕ್ತಿ ಮತ್ತು ಸಾಧ್ಯತೆ’ ವಿಷಯ ಕುರಿತು ಕ್ಯಾನ್ಸರ್ ಗೆದ್ದಿರುವ ರಂಗಕರ್ಮಿ ಆರ್.ಟಿ. ಅರುಣ್‌ಕುಮಾರ್ ಮತ್ತು ಪ್ರಹ್ಲಾದ್ ಎಸ್, ಭಟ್ ಸಂವಾದ ನಡೆಸಿಕೊಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಾ.ಎ.ಎಂ. ಶಿವಕುಮಾರ್, ಡಾ. ಸುನೀಲ್ ಬ್ಯಾಡಗಿ ಆಗಮಿಸಲಿದ್ದು, ಅಕಾಡೆಮಿಯ ಸದಸ್ಯ ರವೀಂದ್ರ ಹೆಚ್. ಅರಳಗುಪ್ಪಿ ಉಪಸ್ಥಿತರಿರುವರು, ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶ್ ಪಿ. ವಲ್ಲಪುರೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಕಾಡೆಮಿಯ ಸದಸ್ಯ ರವೀಂದ್ರ ಹೆಚ್. ಅರಳಗುಪ್ಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!